ಬೆಳಗಿತು ವಾರ್ಷಿಕೋತ್ಸವದ ದೀಪ

hallinews team
0
ಐದು ಸಂಘದ 16 ನೇ ವಾರ್ಷಿಕೋತ್ಸವ

ಹೊನ್ನಾವರ : ಗುಣವಂತೆ ವಲಯದ ಮೂಳ್ಕೋಡ್ ಗ್ರಾಮದ  ಪ್ರಗತಿ ಬಂದು ಹಾಗೂ ಸ್ವಸಹಾಯ ಸಂಘಗಳಾದ, ಶಶಿಧರ ಸಂಘ,ಸುಬ್ರಮಣ್ಯ ಸಂಘ,ನಿಸರ್ಗ,ಸಂಘ ಅರುಣೋದಯ  ಸಂಘ, ಕೆಂಡ ಹೊನ್ನ ಮಾಸ್ತಿ ಸಂಘವು   ತನ್ನ 16 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ  ಹಾಗೂ  ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು  ನೆರವೇರಿಸಿತು. ಐದು ಸಂಘದ ಸದಸ್ಯರು ಸೇರಿ ಏಕತೆಯ  ಸಂಕಲ್ಪಕ್ಕೆ ಭಾಷ್ಯ ಬರೆದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮೇಲ್ವಿಚಾರಕರಾದ ಉದಯ ನಾಯ್ಕ ನೆರವೇರಿಸಿ ಉತ್ತಮ ಒಗ್ಗಟ್ಟುಗಳಿದ್ದಲ್ಲಿ ಉತ್ತಮವಾದ ಸಂಘಗಳನ್ನು, ಹಾಗೂ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ.  ನಿಮ್ಮ 5 ಸಂಘಗಳು ಮಾದರಿ ಸಂಘ. ನಿಮ್ಮೆಲ್ಲರ ಕುಟುಂಬ ಉತ್ತರೋತ್ತರ  ಅಭಿವೃದ್ಧಿ ಆಗಲಿ ಎಂದು ಹಾರೈಸಿದರು. ಒಕ್ಕೂಟದ ಅಧ್ಯಕ್ಷರಾದ ಕುಪ್ಪು ಗೌಡ  ಅಧ್ಯಕ್ಷತೆ ವಹಿಸಿದರು, ಮಾಳ್ಕೋಡ್ ಒಕ್ಕೂಟದ ಅಧ್ಯಕ್ಷರಾದ ಶಂಕರ  ಗೌಡ, ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಹನುಮಂತ ಗೌಡ, ಊರಿನ ಮುಖಂಡರಾದ ನಾರಾಯಣಗೌಡ, ಸೇವಾ ಪ್ರತಿನಿಧಿ ದೀಪ ಅಂಬಿಗ, ಸುಬ್ರಾಯ್ ಗೌಡ, ಕೃಷ್ಣ ಅಂಬಿಗ, ಗಣಪಯ್ಯಗೌಡ, ಸುಬ್ರಮಣ್ಯ, ಹಾಗೂ 5 ಸಂಘದ ಸದಸ್ಯರು ಉಪಸ್ಥಿತರಿದ್ದರು, ಸುಬ್ರಾಯ್ ಗೌಡ ಅವರು ಕಾರ್ಯಕ್ರಮವನ್ನು ನಿರೂಪಿಸಿದರು,ಹಾಗೂ ವರದಿ ಮಂಡನೆ ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದರು.


ಹಳ್ಳಿ ( ಸುದ್ದಿ )ನ್ಯೂಸ್
ಭಾವ ಶುದ್ಧಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!