ಆನಲೈನ್‌ ಗ್ರಾಮಿಣ ವ್ಯಾಸಂಗ ಪ್ರಮಾಣ ಪತ್ರ

Halli News team
0
Karnataka RualStudy Certificate
ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರದ ಮಾಹಿತಿಗಳನ್ನು ಭರ್ತಿ ಮಾಡುವ ಮೊದಲು ಸೂಚನೆಗಳು (ಕ್ಲಿಕ್ ಮಾಡಿ)

ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರದ ಮಹತ್ವ.

ಮಹತ್ವ: ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರವು ಕರ್ನಾಟಕದಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾದ ಮತ್ತು ತುಂಬಾ ಸಹಕಾರಿಯಾದ ದಾಖಲೆ. ಇದು ಉನ್ನತ ವ್ಯಾಸಾಂಗಕ್ಕೆ ಪ್ರವೇಶ ಪಡೆಯಲು, ಸರ್ಕಾರಿ ಉದ್ಯೋಗಗಳನ್ನ ಹೊಂದಲು (ಗಮನಿಸಿ: 15% ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಹೊಂದಿದ ಅಭ್ಯರ್ಥಿಗಳಿಗೆ ಮೀಸಲಾತಿ) ಮತ್ತು ಇತರ ಅಧಿಕೃತ ಕಾರ್ಯಗಳಿಗೆ ಅವಶ್ಯಕ. ಪ್ರತಿ ಸಾರಿಯೂ ಉದ್ಯೋಗಕ್ಕೆ ಕರೆ ಬಂದಾಗೊಮ್ಮೆ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರವನ್ನು ಪಡೆಯಲು ಶಾಲೆಗಳಿಗೆ ಅಭ್ಯರ್ಥಿಗಳು ಸರತಿ ಸಾಲನ್ನ ಹಚ್ಚಿರುತ್ತಾರೆ. ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರವನ್ನ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ತಾವೇ ಸ್ವತಃ ಅರ್ಜಿಗಳನ್ನು ತಂದಿಟ್ಟು ಬರೆದುಕೊಡುವ ಉತ್ತಮ ಶಿಕ್ಷಕರು ಇದ್ದಾರೆ. ಅಥವಾ ಅದೇ ರೀತಿ ಅಭ್ಯರ್ಥಿಗಳೇ ಸರಿಯಾದ ಕ್ರಮದಲ್ಲಿ ಪ್ರಮಾಣ ಪತ್ರವನ್ನ ಭರ್ತಿ ಮಾಡಿ ಪ್ರಿಂಟ್ ತೆಗೆದು ಮುಖ್ಯೋಪಾಧ್ಯಾಯರ ಸಹಿ ಮಾಡಿಸಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ದೃಢೀಕರಣ ಮಾಡಿಸಿ ತಮ್ಮ ಬಳಿ ಇಟ್ಟುಕೊಳ್ಳಬೇಕಾದದ್ದು ಕಡ್ಡಾಯ. ಈ ನಿಟ್ಟಿನಲ್ಲಿ ಹಳ್ಳಿ ನ್ಯೂಸ್ ತಂಡವು ನಿಮಗಾಗಿ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಪಡೆಯಲು ಸುಲಭವಾಗಿ ಮೊಬೈಲ್ ಮೂಲಕ ಅಥವಾ ಕಂಪ್ಯೂಟರ್ ಮೂಲಕ ನಿಮ್ಮ ಮಾಹಿತಿಗಳನ್ನು ಭರ್ತಿ ಮಾಡಿ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಪಡೆಯಲು ಬೆನ್ನಿಗೆ ನಿಂತಿದೆ. ಈ ಪೇಜ್‌ನಲ್ಲಿ "ಪ್ರಮಾಣ ಪತ್ರ ರಚಿಸು/ಪಡೆ " ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಪ್ರಿಂಟ್ ಅಥವಾ ಪಿಡಿಎಫ್ ರೂಪದಲ್ಲಿ ನಿಮ್ಮ ಕೈ ಸೇರುತ್ತದೆ. ನಮ್ಮ ಕಡೆಯಿಂದ ನಿಮಗೊಂದು ಉಚಿತ ಸೇವೆ. ಇದನ್ನ ಬಳಸುವ ವಿಧಾನ ಕೆಳಗೆ ನೀಡಲಾಗಿದೆ.

ಈ ಆನ್‌ಲೈನ್‌ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಭರ್ತಿ ಮಾಡುವ ವಿಧಾನ:
1. ಎಲ್ಲಾ ವಿವರಗಳನ್ನು ಶಾಲಾ ದಾಖಲೆಗಳಲ್ಲಿದ್ದಂತೆಯೇ ನಿಖರವಾಗಿ ಭರ್ತಿ ಮಾಡಿ.
2. ಮೊದಲನೇ ಸಾಲಿನಲ್ಲಿ ಪಾಲಕರ ಹೆಸರನ್ನ ಶಾಲೆಯ ದಾಖಲಾತಿ ವಹಿಯಲ್ಲಿದ್ದಂತೆಯೇ ಭರ್ತಿ ಮಾಡಿ.
3. ಎರಡನೇ ಸಾಲಿನಲ್ಲಿ ಅಭ್ಯರ್ಥಿಯ ಹೆಸರನ್ನ ದಾಖಲಾತಿ ವಹಿಯಲ್ಲಿರುವಂತೆಯೇ ನಿಖರವಾಗಿ ಭರ್ತಿ ಮಾಡಿ.
4. ಮೂರನೇ ಸಾಲಿನಲ್ಲಿ ಜಿಲ್ಲೆ, ತಾಲೂಕು ಮತ್ತು ಗ್ರಾಮದ ವಿವರಗಳನ್ನ ಭರ್ತಿ ಮಾಡಿ.
5. ನಾಲ್ಕನೇ ಸಾಲಿನಲ್ಲಿ ಅಭ್ಯರ್ಥಿ ಆ ಶಾಲೆಯಲ್ಲಿ ಎಷ್ಟನೇ ತರಗತಿಯಿಂದ ಎಷ್ಟನೇ ತರಗತಿಯವರೆಗೆ ಓದಿದ್ದಾರೆ ಎಂಬ ವಿವರ ಭರ್ತಿ ಮಾಡಿ.
6. ಐದನೇ ಸಾಲಿನಲ್ಲಿಅಭ್ಯರ್ಥಿಯು ಅಧ್ಯಯನ ಮಾಡಿದ ಶೈಕ್ಷಣಿಕ ವರ್ಷಗಳನ್ನ ಭರ್ತಿ ಮಾಡಿ (ಶೈಕ್ಷಣಿಕ ವರ್ಷ ಉದಾಹರಣೆಗೆ: 2024-25).
7. ಆರನೇ ಸಾಲಿನಲ್ಲಿ ಶಾಲೆಯ ಹೆಸರನ್ನ ಭರ್ತಿ ಮಾಡಿ.
8. ಶಾಲೆ ಇರುವ ಸ್ಥಳದ ವಿವರಗಳನ್ನ ಭರ್ತಿ ಮಾಡಿ
9. ಕೊನೆಯದಾಗಿ ಸ್ಥಳ ಮತ್ತು ಪ್ರಮಾಣ ಪತ್ರ ಪಡೆಯುತ್ತಿರುವ ದಿನಾಂಕವನ್ನ ನಮೂದಿಸಿ.
10. ಕೆಳಗೆ ಪ್ರಮಾಣ ಪತ್ರ ರಚಿಸು/ಪಡೆ ಬಟನ್‌ ಕ್ಲಿಕ್‌ ಮಾಡಿ.
11. ಪತ್ರವನ್ನ ಸೇವ್‌ ಮಾಡಿ ಪಿಡಿಎಫ್‌ ಪ್ರತಿಯನ್ನ ಪ್ರಿಂಟ್ ಮಾಡಿರಿ.
12. ಶಾಲೆಯ ಮುಖ್ಯೋಪಾಧ್ಯಾಯರಿಂದ ಸಹಿ ಮತ್ತು ಮುದ್ರೆ ಪಡೆಯಿರಿ.
13. ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಣ ಪಡೆಯಿರಿ.
ಗಮನಿಸಿ: *** ಈ ಪ್ರಮಾಣಪತ್ರವು ಕರ್ನಾಟಕ ಪೌರ ಅಧಿನಿಯಮ 1976/1964ರಡಿಯಲ್ಲಿ ನಗರ ಪ್ರದೇಶವಲ್ಲದ ಶಾಲೆಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ಈಗ ಆ ಶಾಲೆ ನಗರ/ಪಟ್ಟಣ ಎಂದು ಘೋಷಣೆಯಾಗಿರಬಹುದು ಆದರೆ ನೀವು ಕಲಿಯುವಾಗ ಅದು ಗ್ರಾಮೀಣ ವ್ಯಾಪ್ತಿಗೆ ಒಳಪಟ್ಟಿದ್ದರೆ ನಿಮ್ಮ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರವನ್ನ ಕ್ಲೈಮ್‌ ಮಾಡಬಹುದು.
*** ಇದರ ಅವಧಿ ಕೇವಲ ಆರು ತಿಂಗಳವರೆಗೆ ಮಾತ್ರ. ಪ್ರಮಾಣ ಪತ್ರ ಪಡೆದ ದಿನಾಂಕದಿಂದ ಆರು ತಿಂಗಳವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.
#ಗ್ರಾಮೀಣ ಪ್ರಮಾಣ ಪತ್ರ, #Online Rural Certificate, #Online, #Rural, #Certificate, #OnlineRuralCertificate, #GenerateRuralCertificateKarnataka

ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ ಭರ್ತಿ ಮಾಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!