
ಬಿದಿರು ಬೆಳೆದರೆ ಏನಾಗುತ್ತದೆ?
ಬಿದಿರು ಬೆಳೆಸುವುದು ದೀರ್ಘಕಾಲದ ಉತ್ತಮ ಕೃಷಿ ಹೂಡಿಕೆಯಾಗಿದ್ದು, ಇದು ತೇವಾಂಶಯುತ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಪ್ರಾರಂಭಿಕ 1-3 ವರ್ಷಗಳಲ್ಲಿ ರೈತರು ಬಿದಿರಿನ ನಡುವಿನ ಜಾಗದಲ್ಲಿ ಉಪಬೆಳೆಯನ್ನು ಬೆಳೆಸಿ ಹೆಚ್ಚುವರಿ ಆದಾಯ ಗಳಿಸಬಹುದು!ಒಂದು ಸಾರೆ ಬಿದಿರನ್ನ ನೆಟ್ಟರೆ 3 ನೇವರ್ಷದಿಂದ ನಿರಂತರವಾಗಿ 20-25 ವರ್ಷಗಳಿಗೂ ಅಧಿಕ ಕಾಲ ಪ್ರತೀ ವರ್ಷ ಆದಾಯ ಗಳಿಸಬಹುದು. ವಿಶೇಷವಾಗಿ ಕಾಗದದ ಕಾರ್ಖಾನೆಗೆ ಕಚ್ಚಾ ವಸ್ತುವಾಗಿ ಬಿದಿರನ್ನ ಉಪಯೋಗಿಸುತ್ತಾರೆ. ಕಾಗದವಂತೂ ನಮಗೆ ನಿರಂತರವಾಗಿ ಬೇಕೇ ಬೇಕು ಹಾಗಾಗಿ ಬಿದಿರಿನ ಬೇಡಿಕೆ ಇದ್ದೇ ಇದೆ. ವಿವರಕ್ಕಾಗಿ ಓದಿ
“ಬಿದಿರು ನಾನಾರಿಗಲ್ಲದವಳು” ಎಂಬ ಕವಿವಾಣಿ ನಮ್ಮ ಹೃದಯವನ್ನ ಹೊಕ್ಕಿದಂತೆ ಗಿಡದ ಬಗ್ಗೆ ಹಾಡಿದ ಇನ್ಯಾವ ಹಾಡು ಹಿತವಾಗಿಲ್ಲ. ಬಿದಿರು ಕೇವಲ ಒಂದು ಗಿಡವಲ್ಲ, ಇದು ಸಹನಶೀಲತೆಯ ಸಂಕೇತ, ಸ್ಥಿರತೆಯ ಪ್ರತೀಕ! ಗಾಳಿಯ ಒತ್ತಡ ತಾಳಿಕೊಂಡು ಬೆಳೆದೂ, ನಮಗೆ ಜೀವನದ ಕಥೆಯನ್ನೇ ಸಾರಿ ಹೇಳುವ ಸಸ್ಯ – ಬಿದಿರು.
ನಮ್ಮ ಜೀವನವೂ ಬಿದಿರಿನಂತೆ. ನಾವೆಷ್ಟು ದಣಿದರೂ, ನಮಗೆ ಎಷ್ಟು ಹೊಡೆತ ಬಿದ್ದರೂ, ನಾವು ನಮ್ಮ ಬೇರೂರಿದ ನೆಲವನ್ನು ಮರೆಯಬಾರದು.
ಬಿದಿರು ಬೆಳೆಯಲು ವರ್ಷಗಳು ಬೇಕು, ಆದರೆ ಬೆಳೆಯಲು ಪ್ರಾರಂಭವಾದಾಗ ಅದು ದಿನದಿಂದ ದಿನಕ್ಕೆ ಎತ್ತರವೇ ಬೆಳೆಯುತ್ತದೆಯೇ ಹೊರತು ಕುಬ್ಜವಾಗುವುದಿಲ್ಲ! ನಮ್ಮ ಸಹನೆ, ಪರಿಶ್ರಮವೂ ಹಾಗೆಯೇ. ತಡವಾದರೂ ಪರವಾಗಿಲ್ಲ, ನಮ್ಮ ಬೆಳವಣಿಗೆಯು ಕೂಡಾ ಸದಾಕಾಲ ನೆಮ್ಮದಿ, ಗಂಭೀರತೆ, ಪ್ರೇರಣೆಯಿಂದ ಕೂಡಿರಬೇಕು.
ಬಿದಿರಿನ ಕೊಡುಗೆ ಅಪಾರ – ಅದು ಮನೆಯ ಮಾಡಾಗಿ, ಏಣಿಯಾಗಿ,ಚಂದದ ಕುರ್ಚಿಯಾಗಿ, ಬುಟ್ಟಿಯಾಗಿ ಹೀಗೆ ಜೀವನಕ್ಕೆ ವೃಂದಾವನದಂತೆ ಚಂದವಾಗುತ್ತದೆ. ಕೈಲಾಸದ ವೃಷಭನ ಕೊಂಬಿನಂತೆ ಅದು ಕಟುವಾದರೂ ಒಳಗೆ ಸವಿಯಾದ ಮಾಯೆ ತುಂಬಿರುತ್ತದೆ. ವೃಷಭನ ಶಕ್ತಿಯಂತೆ ಬಿದಿರು ನಮ್ಮ ಬದುಕಿನ ಭಾಗ, ನಮ್ಮ ಶ್ರದ್ಧೆಯ ಚಿಹ್ನೆ.
ಹೊಳೆ ದಾಟುವ ದೋಣಿಯ ಹರಿಗೋಲಾಗಿ, ಮಕ್ಕಳ ಹಿಗ್ಗುವ ತೊಟ್ಟಿಲಾಗಿ, ಚಂದನೆಯ ಹಾಳೆಯಾಗಿ, ಆಭರಣವಾಗಿ, ನಮ್ಮ ಜೊತೆಗೇ ಇರುತ್ತದೆ. ಬಿದಿರ ಜಾಡಿನಲ್ಲಿ ಬದುಕಿನ ಪಾಠವಿದೆ – ಎಷ್ಟೇ ಅಲೆದಾಡಿದರೂ, ಎಷ್ಟೇ ಹೊಡೆತ ಬಿದ್ದರೂ ನಾವು ಬದಲಾಗಬಾರದು ಎಂಬ ಸಂದೇಶ ನೀಡುತ್ತದೆ.
ನಾವು ಎಲ್ಲಿಯೂ ಇದ್ದರೂ ಬಿದಿರಿನಂತೆ ಇರಬೇಕು – ಬಗ್ಗಬೇಕಾದಾಗ ಬಗ್ಗಿ, ಎತ್ತರಕ್ಕೆ ಬೆಳೆಯಬೇಕಾದಾಗ ಬೆಳೆದು, ಯಾವತ್ತೂ ತನ್ನ ಜೀವನವ ಗೌರವದಿಂದಲೇ ಸಾಗಿಸುವುದು.!
ಬಿದಿರಿನ ಬೆಳೆಗಳ ಬಗ್ಗೆ ತಿಳಿದುಕೊಂಡು ಅದರಿಂದಲೇ ಜೀವನ ಸಾಗಿಸುವ ಮಂದಿ ಇದ್ದಾರೆ. ಈ ಕೆಳಗಿನ ವಿವರದಲ್ಲಿ ಅದರ ಕುರಿತಾದ ಸಮಗ್ರ ವರದಿ ಇದೆ. ನಿಮಗೊಂದು ಆಸಕ್ತಿ ಕೆರಳಿಸುವ ವಿವರ ಇದೆ. 🌿💚
ಬಿದಿರು ಬೆಳೆಸುವುದು ದೀರ್ಘಕಾಲದ ಉತ್ತಮ ಕೃಷಿ ಹೂಡಿಕೆಯಾಗಿದ್ದು, ಇದು ತೇವಾಂಶಯುತ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ ಮತ್ತು ಕಡಿಮೆ ನಿರ್ವಹಣೆಯೊಂದಿಗೆ ಜೀವಮಾನವ್ಯಾಪಿ ಆದಾಯವನ್ನು ಒದಗಿಸುತ್ತದೆ. ಪ್ರಾರಂಭಿಕ ಎರಡು ವರ್ಷಗಳಲ್ಲಿ, ರೈತರು ಬಿದಿರಿನ ನಡುವಿನ ಜಾಗದಲ್ಲಿ ಉಪಬೆಳೆಯನ್ನು ಬೆಳೆಸಿ ಹೆಚ್ಚುವರಿ ಆದಾಯ ಗಳಿಸಬಹುದು
ಬಿದಿರು ಬೆಳೆಯ ವೆಚ್ಚ ಮತ್ತು ಹೂಡಿಕೆ ವಿವರ
ವಿವರ | ಖರ್ಚು (ರೂಪಾಯಿಗಳಲ್ಲಿ- ಅಂದಾಜು ವೆಚ್ಚ) |
---|---|
ಭೂಸಿದ್ಧತೆ ಮತ್ತು ತಾರಗೋಡೆ | ₹45,000-55000 |
ಬಾಂಬೂ ಗಿಡಗಳು (500 ಗಿಡಗಳು) | ₹25,000-35000 |
ನೆಡುವಿಕೆಯ ಕೆಲಸದ ಬಾಬ್ತು | ₹10,000- 20000 |
ಗೊಬ್ಬರ ಮತ್ತು ನೀರಾವರಿ ವ್ಯವಸ್ಥೆ | ₹15,000-30000 |
ಬದು ತೋಡುವುದು | ₹15,000-20000 |
ಇತರ ಖರ್ಚು | ₹25,000-35000 |
ಒಟ್ಟು ವೆಚ್ಚ | ₹1,25,000 – ₹2,00,000 |
ಬಾಂಬೂ ಬೆಳೆಗಾರಿಕೆಯ ಲಾಭ ಅಂದಾಜು ಲೆಕ್ಕಾಚಾರ
ಪ್ರತಿ ಎಕರೆಗೆ ಬಿದಿರು ಕೋಲಿನ ಅಂದಾಜು ಇಳುವರಿ | ಒಟ್ಟು ಅಂದಾಜು ಆದಾಯ |
---|---|
500 ಪೋಲ್ ₹500 ರಂತೆ | ₹2,50,000 |
750 ಪೋಲ್ ₹500 ರಂತೆ | ₹3,75,000 |
1000 ಪೋಲ್ ₹500 ರಂತೆ | ₹5,00,000 |
ನಿಮ್ಮ ಊರಿಗೆ ಉತ್ತಮ ಬಾಂಬೂ ತಳಿಗಳು
- ಬಾಂಬೂಸ ಬಾಲ್ಕೂ (ಬೀಮಾ ಬಾಂಬೂ) - ಹೆಚ್ಚು ಇಳುವರಿ, ವೇಗವಾದ ಬೆಳವಣಿಗೆ
- ಡೆಂಡ್ರೋಕ್ಯಾಲಮಸ್ ಸ್ಟಾಕ್ಸಿ (ಮಹಾಬಲಿ ಬಾಂಬೂ) - ಬಲವಾದ ಮತ್ತು ಬಾಳಿಕೆ ಬರುವ
- ಬಾಂಬೂಸ ತುಲ್ಡಾ (ಭಾರತೀಯ ಟಿಂಬರ್ ಬಾಂಬೂ) - ನಿರ್ಮಾಣ ಮತ್ತು ಪೀಠೋಪಕರಣಗಳಿಗೆ ಉತ್ತಮ
- ಡೆಂಡ್ರೋಕ್ಯಾಲಮಸ್ ಸ್ಟ್ರಿಕ್ಟಸ್ (ಸಾಲಿಡ್ ಬಾಂಬೂ) - ಒಣನೆಲ ಪ್ರದೇಶಗಳಿಗೆ ಉತ್ತಮ
- ಗುವಾಡುವಾ ಆಂಗುಸ್ಟಿಫೋಲಿಯಾ (ಕೊಲಂಬಿಯನ್ ಜಾಯಂಟ್ ಬಾಂಬೂ) - ದೊಡ್ಡ ಮತ್ತು ವಾಣಿಜ್ಯ ಮೌಲ್ಯ
ಬಿದಿರು ಬೆಳೆಗಾಗಿ ಸಂಪರ್ಕಿಸಿ
📞 ಕರೆ ಮಾಡಿ: 9480718164
📧 ಇಮೇಲ್: sancharishankar1@gmail.com