ಆದಾಯ ತೆರಿಗೆಯಲ್ಲಿ ದಾನದ ಹಣ ನೀವಂದುಕೊಂಡಷ್ಟು ವಿನಾಯಿತಿ ಇದೆಯೇ..

Halli News team
0

Section 80Gಯ ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿಗಾಗಿ ದಾನರೂಪದಲ್ಲಿ ನೀಡಿದ ಹಣ ನಮಗೆಷ್ಟು ತೆರಿಗೆ ವಿನಾಯಿತಿ ನೀಡುತ್ತದೆ? "Use 80G Calculator"  

ಸಂಪೂರ್ಣ ಮಾರ್ಗದರ್ಶಿ ನಿಮಗಾಗಿ

Donation Paid under 80G of Indian Tax rules

ಸಾಮಾನ್ಯ ಪ್ರಶ್ನೆಗಳು:

  • 80Gಯಡಿಯಲ್ಲಿ  ನಾನು ದಾನ ನೀಡಿದ ಹಣ ಯಾವ ವಿಭಾಗದಡಿಯಲ್ಲಿ ನಿರ್ವಹಣೆ ಮಾಡಬೇಕು?
  • ನಾನು ದಾನ ನೀಡಿದ ಹಣ ಪೂರ್ತಿ ರಿಬೇಟ್‌ ರೂಪದಲ್ಲಿ ಸಿಗುವುದೇ?
  • ನಾನು ಯಾವ ಸಂಸ್ಥೆಗೆ ದಾನ ನೀಡಬೇಕು?
ಟ್ಯಾಕ್ಸ ರಿಟರ್ನ ಸಲ್ಲಿಸುವಾಗ ಈ ಕೆಳಗಿನ ವಿಭಾಗ 80Gದಲ್ಲಿ ಕಾಣಸಿಗುತ್ತದೆ, ಅದು ನಮಗೆ ಗೊಂದಲವಾಗಿ ಕಾಡುತ್ತದೆ, ನಾನು ದಾನ ನೀಡಿದ ಹಣ ಯಾವುದಕ್ಕೆ ಸೇರಿದ್ದು, ಅದರಲ್ಲಿ ಯಾವ ವಿಭಾಗವನ್ನ ಆಯ್ಕೆ ಮಾಡಿಕೊಳ್ಳಬೇಕು? ಅದರಲ್ಲಿ ಕಾಣಿವ ನಾಲ್ಕು ವಿಭಾಗಗಳು ಈ ಕೆಳಗಿನಂತಿದೆ:
  1. Donations entitled for 100% deduction without qualifying limit
    (ಅರ್ಹತಾ ಮಿತಿಯಿಲ್ಲದೆ 100% ಕಡಿತಕ್ಕೆ ಅರ್ಹವಾದ ದೇಣಿಗೆಗಳು)
  2. Donations entitled for 50% deduction without qualifying limit
    (ಅರ್ಹತಾ ಮಿತಿಯಿಲ್ಲದೆ 50% ಕಡಿತಕ್ಕೆ ಅರ್ಹವಾದ ದೇಣಿಗೆಗಳು)
  3. Donations entitled for 100% deduction subject to qualifying limit
    (ಅರ್ಹತಾ ಮಿತಿಗೆ ಒಳಪಟ್ಟು 100% ಕಡಿತಕ್ಕೆ ಅರ್ಹವಾದ ದೇಣಿಗೆಗಳು)
  4. Donations entitled for 50% deduction subject to qualifying limit
    (ಅರ್ಹತಾ ಮಿತಿಗೆ ಒಳಪಟ್ಟು 50% ಕಡಿತಕ್ಕೆ ಅರ್ಹವಾದ ದೇಣಿಗೆಗಳು)

ಸಾಕಷ್ಟು ಪ್ರಶ್ನೆಗಳು ನಮಗೆ ಪದೇ ಪದೇ ಕಾಡುತ್ತಿರುತ್ತದೆ, ಅದಕ್ಕೆ ನಾವು, ಇದರ ಸಹವಾಸ ಸಾಕು ಅಂತ ಇದಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗುವುದು ಸಾಮಾನ್ಯವಾಗಿಬಿಟ್ಟಿದೆ. ನಿಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ಪರಿಹರಿಸಲು, ನಮ್ಮ ಹಳ್ಳಿ ನ್ಯೂಸ್‌ ಟೀಮ್‌ ಸದಾ ಸಿದ್ದ, ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಿ. 

ಹಿನ್ನೆಲೆ:

ಭಾರತದ ಆದಾಯ ತೆರಿಗೆ ಶಾಖೆಯು (Income Tax Department) ಸಾರ್ವಜನಿಕ ಹಿತದ ಕಾರ್ಯಗಳಿಗಾಗಿ ನೀಡುವ ದಾನಗಳಿಗೆ ರಿಯಾಯಿತಿ ನೀಡುತ್ತದೆ. ಇದು ಸಮಾಜಸೇವೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ತೆರಿಗೆ ಭಾರವನ್ನು ಕಡಿಮೆ ಮಾಡುವ ದ್ವಿಮುಖ ಪ್ರಯೋಜನವನ್ನೂ ನೀಡುತ್ತದೆ. ಈ ಲೇಖನದಲ್ಲಿ ನಾವು Section 80G ಅಡಿಯಲ್ಲಿ ಬರುವ ಎಲ್ಲಾ ರಿಯಾಯಿತಿ ವಿಧಾನಗಳನ್ನು ವಿವರಿಸಲಾಗಿದೆ. 

ಮುಂದೆ ಹೋಗುವ ಮುನ್ನ: ಇಲ್ಲಿರುವ ಅಭಿಪ್ರಾಯ ನಮ್ಮ ಸ್ವಂತದಲ್ಲ ಹಾಗೂ ನಿಯಮಾವಳಿಗಳನ್ನ ಓದಿ ಅರ್ಥಮಾಡಿಕೊಂಡ ಹಾಗೆ ನಿಮಗೆ ನೀಡಲಾಗಿದೆ. ಕಾಲದಿಂದ ಕಾಲಕ್ಕೆ ಬದಲಾಗುವ ನಿಯಮಾವಳಿಗಳ ಪರಿಚಯ ಇರಬೇಕಾದದ್ದು ಅಪೇಕ್ಷಣೀಯ. ಇದು 2024-25 ನೇಸಾಲಿನ ವರ್ಷದ ತೆರಿಗೆ ಸಲುವಾಗಿ 2025 ರ ಜೂನ್‌/ಜುಲೈ ತಿಂಗಳಲ್ಲಿ ಬರೆಯಲಾಗಿದೆ.

1. ಯಾವುದೇ ಅರ್ಹತಾ ಮಿತಿ ಇಲ್ಲದೆ 100% ಕಡಿತ/ರಿಯಾಯಿತಿ ನೀಡುವ ದಾನಗಳು.
(Donations entitled for 100% deduction without qualifying limit )

ಅರ್ಥ: ನೀವು ನೀಡಿದ ದಾನದ ಸಂಪೂರ್ಣ ಮೊತ್ತವನ್ನು (100%) ಟ್ಯಾಕ್ಸಗೆ ಲಾಗೂ ಆಗುವ ಮೊತ್ತದಿಂದ ಕಡಿತಗೊಳಿಸಬಹುದು. ಇಲ್ಲಿ ಯಾವುದೇ ಗರಿಷ್ಠ ಮಿತಿ (upper limit) ಇರುವುದಿಲ್ಲ. ನೀವು ಎಷ್ಟು ದಾನ ನೀಡಿದ್ದೀರೋ ಅಷ್ಟೂ ಹಣವೂ ರಿಬೇಟ್‌ಗೆ ಒಳಪಡುತ್ತದೆ. ಇದು ಈ ಕೆಳಗೆ ಸೂಚಿಸಿದ ಸಂಸ್ಥೆಗಳಿಗೆ ದಾನ ನೀಡಿದಾಗ ಮಾತ್ರ ಅನ್ವಯವಾಗುತ್ತದೆ.

ಉದಾಹರಣೆಗಳು:

  • ಪ್ರಧಾನ ಮಂತ್ರಿ ರಾಷ್ಟ್ರೀಯ ನಿಧಿ (PMNRF)
  • ರಾಷ್ಟ್ರೀಯ ರಕ್ಷಣಾ ನಿಧಿ (National Defence Fund)
  • PM CARES Fund
  • ಸ್ವಚ್ಛ ಭಾರತ್ ಕೋಶ್ (Swachh Bharat Kosh)
  • ಕ್ಲೀನ್ ಗಂಗಾ ಫಂಡ್ (Clean Ganga Fund)

ನಿಮಗಾಗಿ ಒಂದು ಉದಾಹರಣೆ: ನೀವು PMNRF ಗೆ ₹2,00,000 ದಾನ ನೀಡಿದರೆ, ನಿಮ್ಮ taxable income ನಿಂದ ಸಂಪೂರ್ಣ ₹2,00,000 ಕಡಿತಗೊಳ್ಳುತ್ತದೆ.

2. ಯಾವುದೇ ಅರ್ಹತಾ ಮಿತಿ ಇಲ್ಲದೆ 50% ಕಡಿತ/ರಿಯಾಯಿತಿ ನೀಡುವ ದಾನಗಳು.
(Donations entitled for 50% deduction without qualifying limit )

ಅರ್ಥ: ನೀವು ನೀಡಿದ ದಾನದ ಮೊತ್ತದ 50% ರಷ್ಟನ್ನು ಮಾತ್ರ taxable income ನಿಂದ ಕಡಿತಗೊಳಿಸಬಹುದು. ಇಲ್ಲಿಯೂ ಗರಿಷ್ಠ ಮಿತಿ ಇರುವುದಿಲ್ಲ. ಗರಿಷ್ಠ ಮಿತಿ ಎಂದರೆ ಉದಾಹರಣೆಗೆ 80C ಅಡಿಯಲ್ಲಿ ಮಿತಿ 1,50,000 ಕ್ಕೆ ಇದೆ. ಇದಕ್ಕೆ ಸಂಬಂದಿಸಿದಂತೆ ನೀವು ಎಷ್ಟೇ ಹಣ ಉಳಿಸಿದರೂ ಅದು 1,50,000 ಕ್ಕೆ ಸೀಮಿತವಾಗುತ್ತದೆ. ಉಳಿದದ್ದು ಲೆಕ್ಕಕ್ಕಿಲ್ಲ.

ಉದಾಹರಣೆಗಳು:

  • ಜವಾಹರಲಾಲ್ ನೆಹರು ಮೆಮೋರಿಯಲ್ ಫಂಡ್
  • ಪ್ರಧಾನ ಮಂತ್ರಿ ಬರ ನಿವಾರಣಾ ನಿಧಿ
  • ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್
  • ರಾಜೀವ್ ಗಾಂಧಿ ಫೌಂಡೇಶನ್

ಉದಾಹರಣೆಗಾಗಿ: ನೀವು ₹2,00,000 ಹಣವನ್ನು ಮೇಲ್ಕಾಣಿಸಿ ಸಂಸ್ಥೆಗಳಲ್ಲಿ ಒಂದಕ್ಕೆ ದಾನ ನೀಡಿದರೆ, ₹1,00,000 (50%) ಮಾತ್ರ ನಿಮ್ಮ ಆದಾಯ ತೆರಿಗೆ ಲೆಕ್ಕಕ್ಕೆ ಪರಿಗಣಿಸಿಕೊಳ್ಳಬಹುದು.

3. ಅರ್ಹತಾ ಮಿತಿಗೆ ಒಳಪಟ್ಟು 100% ಕಡಿತಕ್ಕೆ ಅರ್ಹವಾದ ದೇಣಿಗೆಗಳು.(10% AGTI ಮಿತಿಯೊಂದಿಗೆ)
Donations entitled for 100% deduction subject to qualifying limit.

ಅರ್ಥ: ದಾನದ ಸಂಪೂರ್ಣ ಮೊತ್ತವನ್ನು ಕಡಿತಗೊಳಿಸಬಹುದು, ಆದರೆ ನಿಮ್ಮ  ಲೆಕ್ಕದಲ್ಲಿರುವ ತೆರಿಗೆಗೆ ಪರಿಗಣಿತವಾಗಿರುವ ಒಟ್ಟೂ ಮೊತ್ತದ (Adjusted Gross Total Income (AGTI))  10% ಮಿತಿಯೊಳಗೆ ಮಾತ್ರ ಇರುತ್ತದೆ.

AGTI ಲೆಕ್ಕಾಚಾರ: ನಿಮ್ಮ Gross Total Income ನಿಂದ 80C ರಿಂದ 80U ವರೆಗಿನ ಎಲ್ಲಾ ಕಡಿತಗಳನ್ನು (80G ಹೊರತುಪಡಿಸಿ) ಕಳೆಯಬೇಕು.

ಉದಾಹರಣೆಗಳು:

  • ಕುಟುಂಬ ಯೋಜನೆಗೆ ಸಂಬಂದಿಸಿ ಕಾರ್ಯ ನಿರ್ವಹಿಸುವ ಸಂಸ್ಥೆಗಳು, ಆ ಯೋಜನೆಗಳಿಗಾಗಿ ಸರ್ಕಾರ ಅಥವಾ ಅನುಮೋದಿತ ಸ್ಥಳೀಯ ಪ್ರಾಧಿಕಾರ
  • ಭಾರತೀಯ ಒಲಂಪಿಕ್ ಸಂಘ.

ಉದಾಹರಣೆ: ನಿಮ್ಮ AGTI ₹10,00,000 ಆಗಿದ್ದರೆ, ಗರಿಷ್ಠ ಕಡಿತ = ₹1,00,000 (10% of AGTI). ನೀವು ₹2,00,000 ದಾನ ನೀಡಿದರೂ, ₹1,00,000 ಮಾತ್ರ ಕಡಿತಗೊಳ್ಳುತ್ತದೆ.

4. ಅರ್ಹತಾ ಮಿತಿಗೆ ಒಳಪಟ್ಟು 50% ಕಡಿತಕ್ಕೆ ಅರ್ಹವಾದ ದೇಣಿಗೆಗಳು
Donations entitled for 50% deduction subject to qualifying limit (10% AGTI ಮಿತಿಯೊಂದಿಗೆ)

ಅರ್ಥ:  ಚಾರಿಟೇಬಲ್‌ ಟ್ರಸ್ಟ್‌ಗೆ ನೀವೆಷ್ಟೇ ದಾನ ನೀಡಿದರೂ 50% ಮೊತ್ತ ಮಾತ್ರ ಆದಾಯ ತೆರಿಗೆ ಲೆಕ್ಕಾಚಾರಕ್ಕೆ ಒಳಗೊಳ್ಳುತ್ತದೆ ಮತ್ತು ಅದು ನಿಮ್ಮ AGTI ನ 10% ಮಿತಿಯೊಳಗೆ ಇರಬೇಕು. ಇದಕ್ಕೆ ಸಂಬಂದಿತ ಸಂಸ್ಥೆಗಳು ಭಾರತದಲ್ಲಿ ಲಕ್ಷದಲ್ಲಿ ಇವೆ. ಹಾಗಾಗಿ ಅಂತಹ ಸಂಸ್ಥೆಗಳಿಗೆ ನೀಡಿದ ದಾನದ ಮೊತ್ತದ ಮಿತಿಯ ಅರಿವು ನಮಗಿರಲೇಬೇಕು. ಇದರ ಒಟ್ಟಾರೆ ಸಾರಾಂಶ ಹೇಳಬೇಕೆಂದರೆ, ನೀವು ಭಾರತೀಯನಾಗಿ ದೇಶ ಸೇವೆಯ ಸದುದ್ದೇಶದಿಂದ ದಾನ ನೀಡಿ ಸಂತಸ ಪಡಬೇಕು, ಅದರ ಹೊರತಾಗಿ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ದಾನ ನೀಡದಿರಿ ಎನ್ನುವುದು ನಮ್ಮ ಸಲಹೆಯಷ್ಟೆ. 

ಉದಾಹರಣೆಗಳು:

  • 80G ಅಡಿಯಲ್ಲಿ ಅನುಮೋದಿತವಾದ ಹೆಚ್ಚಿನ ಸ್ಥಳೀಯ ಸಂಸ್ಥೆಗಳು, ದತ್ತಿ ಸಂಸ್ಥೆಗಳು (Charitable Trusts)
  • ಸ್ಥಳೀಯ ಸಂಸ್ಥೆಯಿಂದ ನಡೆಸಲ್ಪಡುವ ಧಾರ್ಮಿಕ ಸಂಸ್ಥೆಗಳು
  • ಇತರೆ ಅನುಮೋದಿತ NGO ಗಳು

ಪ್ರಾಯೋಗಿಕ ಉದಾಹರಣೆ: ನಿಮ್ಮ AGTI ₹12,00,000 ಮತ್ತು ನೀವು ಸ್ಥಳೀಯ ದತ್ತಿ ಸಂಸ್ಥೆಗೆ ₹2,00,000 ದಾನ ನೀಡಿದರೆ:

  • 10% of AGTI = ₹1,20,000 (ಗರಿಷ್ಠ ಮಿತಿ)
  • ಕಡಿತ = 50% of ₹1,20,000 = ₹60,000
*** ನಿಮಗೆ ₹60,000 ಮಾತ್ರ ರಿಯಾಯಿತಿ ದೊರೆಯುತ್ತದೆ.


    🧮 80Gಅಡಿಯಲ್ಲಿ ದಾನದ ರೂಪದಲ್ಲಿ ನೀಡಿದ ಹಣದ ತೆರಿಗೆಯ ಕ್ಯಾಲ್ಕುಲೇಟರ್

    📊 AGTI ಎಷ್ಟು ನಿಮ್ಮದು (ಸರಿಹೊಂದಿಸಿದ ಒಟ್ಟು ಆದಾಯ ತಿಳಿಯಿರಿ)

    💸 ದಾನದ ರಿಯಾಯಿತಿಯ ಲೆಕ್ಕಾಚಾರ

ಮುಖ್ಯ ಸೂಚನೆಗಳು

  • ದಾನ ಸಂಸ್ಥೆಯು 80G(5)(vi) ಅಡಿಯಲ್ಲಿ ನೋಂದಾಯಿತವಾಗಿರಬೇಕು
  • ದಾನದ ರಸೀತಿಯಲ್ಲಿ ಸಂಸ್ಥೆಯ PAN ಮತ್ತು ನೋಂದಣಿ ಸಂಖ್ಯೆ ಇರಬೇಕು
  • ದಾನದ ದಿನಾಂಕದಂದು ಸಂಸ್ಥೆಯ 80G ಮಾನ್ಯತೆ ಸಕ್ರಿಯವಾಗಿರಬೇಕು
  • ನಗದು ದಾನಕ್ಕೆ ₹2,000 ಗಿಂತ ಹೆಚ್ಚಿನ ರಿಯಾಯಿತಿ ದೊರೆಯುವುದಿಲ್ಲ

ತೆರಿಗೆ ಯೋಜನೆ ಸಲಹೆಗಳು

ದಾನದ ಮೂಲಕ ಗರಿಷ್ಠ ತೆರಿಗೆ ಉಳಿತಾಯ ಪಡೆಯಲು:

  1. 100% ರಿಯಾಯಿತಿ (ಯಾವುದೇ ಮಿತಿ ಇಲ್ಲದ) ಸಂಸ್ಥೆಗಳಿಗೆ ಆದ್ಯತೆ ನೀಡಿ
  2. ದಾನವನ್ನು ಚೆಕ್/ಡಿಮಾಂಡ್ ಡ್ರಾಫ್ಟ್/ಆನ್ಲೈನ್ ಟ್ರಾನ್ಸ್ಫರ್ ಮೂಲಕ ಮಾಡಿ
  3. ಸಂಸ್ಥೆಯ 80G ಪ್ರಮಾಣಪತ್ರದ ಸ್ಥಿತಿಯನ್ನು Income Tax ವೆಬ್ಸೈಟ್ ನಲ್ಲಿ ಪರಿಶೀಲಿಸಿ
  4. ದಾನದ ವರ್ಷದ March 31 ರೊಳಗೆ ದಾನವನ್ನು ಪೂರ್ಣಗೊಳಿಸಿ

ಸಾಮಾನ್ಯ ತಪ್ಪುಗಳು ಮತ್ತು ತಪ್ಪಿಸುವ ಮಾರ್ಗಗಳು

1. ಸ್ಥಳೀಯ ದೇವಸ್ಥಾನ/ಮಸೀದಿಗೆ ದಾನ: ಇವುಗಳಲ್ಲಿ ಹೆಚ್ಚಿನವು 80G ಅಡಿಯಲ್ಲಿ ಅನುಮೋದನೆ ಪಡೆದಿಲ್ಲ. ದಾನ ಮಾಡುವ ಮೊದಲು ಪರಿಶೀಲಿಸಿ.

2. ರಸೀದಿ ಇಲ್ಲದ ದಾನ: ತೆರಿಗೆ ಕಡಿತಕ್ಕೆ ಮಾನ್ಯವಾದ ರಸೀದಿ ಅತ್ಯಗತ್ಯ.

3. AGTI ಲೆಕ್ಕಾಚಾರದ ತಪ್ಪು: 80G ಮಿತಿಯು AGTI ನ 10% ಎಂಬುದನ್ನು ನೆನಪಿಡಿ, Gross Income ಅಲ್ಲ.

ಉಪಸಂಹಾರ

Section 80G ರಿಯಾಯಿತಿಯು ಸಮಾಜಸೇವೆ ಮತ್ತು ತೆರಿಗೆ ಉಳಿತಾಯ ಎರಡನ್ನೂ ಒದಗಿಸುವ ಅಪೂರ್ವ ಅವಕಾಶ. ಆದರೆ ವಿವಿಧ ವರ್ಗಗಳ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಂಡು, ಸರಿಯಾದ ಸಂಸ್ಥೆಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯ. ನಿಮ್ಮ AGTI, ದಾನದ ಪ್ರಕಾರ ಮತ್ತು ಸಂಸ್ಥೆಯ ಸ್ಥಿತಿಯನ್ನು ಪರಿಗಣಿಸಿ ಸೂಕ್ತವಾದ ತೆರಿಗೆ ಯೋಜನೆ ಮಾಡಿಕೊಳ್ಳಿ.

ಯಾವುದೇ ಸಂದೇಹವಿದ್ದರೆ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ಅಥವಾ Income Tax Department ಅಧಿಕೃತ ವೆಬ್ಸೈಟ್ ನಲ್ಲಿ ಪರಿಶೀಲಿಸಿ.

ದಯವಿಟ್ಟು ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಿಖರವಾದ ತೆರಿಗೆ ಲೆಕ್ಕಾಚಾರಕ್ಕಾಗಿ ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!