ಬಯಲುಸೀಮೆಯಲ್ಲೂ ಕಾಳುಮೆಣಸು ಬೆಳಯಬಹುದೇ, ಲೇಖನ ಓದಿ

Halli News team
0

ಕಾಳು ಮೆಣಸು ಬೆಳೆಯ ವಿಧಾನ (ಕರ್ನಾಟಕ)

Pepper crop representative image

ಕಾಳು ಮೆಣಸು (Pepper) ಭಾರತದ ಪ್ರಾಚೀನ ಮಸಾಲೆ ಬೆಳೆಗಳಲ್ಲಿ ಒಂದು. ಇದನ್ನು "ಮಸಾಲೆಗಳ ರಾಜ" ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕನ್ನಡ, ಅಖಂಡ ದ.ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಳು ಮೆಣಸನ್ನು ಬೆಳೆಯುತ್ತಾರೆ.

ಬೆಳೆಯಲು ಯೋಗ್ಯ ಪ್ರದೇಶಗಳು

Creative pepper cropping image

ಕರ್ನಾಟಕದಲ್ಲಿ ಮುಖ್ಯವಾಗಿ ಬೆಳೆಯುವ ಜಿಲ್ಲೆಗಳು:
  1. ಉತ್ತರ ಕನ್ನಡ
  2. ಕೊಡಗು
  3. ಚಿಕ್ಕಮಗಳೂರು
  4. ಹಾಸನ
  5. ಶಿವಮೊಗ್ಗ
  6. ದಕ್ಷಿಣ ಕನ್ನಡ
  7. ಹಾಗೆ ಈಗ ನೀವು ನಿಮ್ಮ ಪ್ರದೇಶದಲ್ಲಿ ಬೆಳಯಲು ಸಾಧ್ಯವೇ ಎಂಬುದನ್ನ ನೋಡಬೇಕು.

ಬೆಳೆಯ ವೆಚ್ಚ (ಪ್ರತಿ ಎಕರೆಗೆ)

Gathered Pepper illustrated image


ತಮ್ಮ ಜಾಗದಲ್ಲಿ ಕಾಳುಮೆಣಸಿನ ಬೆಳೆ ಬೆಳೆಯಬಹುದೇ ಎಂದಾದರೆ ಎಷ್ಟು ಖರ್ಚಾಗಬಹುದು ಎಂಬ ಅಂದಾಜು ವೆಚ್ಚ ಇಲ್ಲಿದೆ, ನಿಮಗೆ ಸಹಾಯವಾಗಬಹುದು. ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮನ್ನ ಸಂಪರ್ಕಿಸಿ.
ವಸ್ತು ವೆಚ್ಚ (₹)
ಸಸಿಗಳು 15,000
ಎರೆಮಣ್ಣು/ಗೊಬ್ಬರ 8,000
ನೀರಾವರಿ 5,000
ಶ್ರಮ ವೆಚ್ಚ 12,000
ಇತರೆ 5,000
ಒಟ್ಟು 45,000

ಉತ್ಪಾದನೆ ಮತ್ತು ಆದಾಯ

ಇಲ್ಲಿ ಅಂದಾಜು ಬೆಲೆ ನೀಡಲಾಗಿದೆ. ಇಂದಿನ ಮಾರುಕಟ್ಟೆ ಬೆಲೆ ಪರೀಕ್ಷಿಸಿ ನೋಡಿ. ಇದನ್ನ ಮಾಸಾಲೆಯ ರಾಜ ಎಂದು ಕರೆಯುತ್ತಾರೆ. ಹಾಗಾಗಿ ಇದಕ್ಕೆ ಬೇಡಿಕೆ ಯಾವಾಗಲೂ ಇರುತ್ತದೆ. ಬೆಲೆ ಮಾರುಕಟ್ಟೆಗೆ ಸಂಬಂದಿಸಿದಂತೆ ವ್ಯತ್ಯಾಆಗುತ್ತಾ ಇರಬಹುದು, ಒಮ್ಮೆ ಕ್ವಿಂಟಾಲ್‌ಗೆ 80,000/- ಆದ ದಾಖಲೆ ಇದೆ.
ವರ್ಷ ಉತ್ಪಾದನೆ (ಕೆಜಿ/ಎಕರೆ) ಬೆಲೆ (₹/ಕೆಜಿ) ಒಟ್ಟು ಆದಾಯ
1ನೇ ವರ್ಷ 150 600+ 90,000
2ನೇ ವರ್ಷ 300 600+ 1,80,000
3ನೇ ವರ್ಷ ನಂತರ 1000+ 600+ 6,00,000+

ಬೆಳೆಯ ವಿಧಾನ

Pepper crop illustrated image

ಮಣ್ಣು ಮತ್ತು ಹವಾಮಾನ

ಪಿಪ್ಪಲಿ ಬೆಳೆಗೆ ಫಲವತ್ತಾದ, ನೀರು ಚೆನ್ನಾಗಿ ಬಸಿದು ಹೋಗುವ ಕೆಂಪು ಮಣ್ಣು ಉತ್ತಮ. 10°C ರಿಂದ 40°C ತಾಪಮಾನ ಸಹಿಷ್ಣು. ಜಾಸ್ತಿ ಒದ್ದೆಯ ಮಾತಾವರಣ ಇದ್ದರೆ, ನೀರು ನಿಲ್ಲುವ ಸ್ಥಳವಾದರೆ ಕಾಳುಮೆಣಸಿನ ಬಳ್ಳಿ ಕೊಳೆಯುವುದು ನಿಷ್ಚಿತ. ಹಾಗಾಗಿ ನೀರು ನಿಲ್ಲದಂತೆ ಕಾಪಾಡುವುದು ಬಹು ಮುಖ್ಯ. ಬಹುಶಃ ಬಯಲು ಸೀಮೆಯಲ್ಲಿ ಕಾಳುಮೆಣಸಿನ ಬಳ್ಳಿ ಬೆಳೆಸುವ ಪ್ರಯೋಗ ನಡೆಯಲು ಶುರುವಾಗಿದೆ.

ನಾಟಿ ವಿಧಾನ

  1. ಏಪ್ರಿಲ್-ಮೇ ತಿಂಗಳು ನಾಟಿ ಮಾಡುವುದು ಉತ್ತಮ
  2. 3x3 ಮೀಟರ್ ಅಂತರದಲ್ಲಿ ನಾಟಿ ಮಾಡಿ
  3. ನೆರಳು ಕೊಡುವ ಮರಗಳನ್ನು ಮೊದಲು ನೆಟ್ಟುಕೊಳ್ಳಿ
  4. ಇನ್ನೂ ನೀವು ತಿಳಿದುಕೊಳ್ಳುವ ವಿಷಯ ಬಹಳ ಇದೆ, ನಮ್ಮ ಸಲಹೆಗಾರರನ್ನ ಸಂಪರ್ಕಿಸಿ

ಸಂಪರ್ಕ ಸಂಖ್ಯೆಗಳು

ನಮ್ಮ ಗೌರವಾನ್ವಿತ ಸಲಹೆಗಾರರು:
  • ಶ್ರೀ ಗಣಪತಿ ಹೆಬ್ಬಾರ, ಯಲ್ಲಾಪುರ, ಬೆಳೆಗಾರರು - 9481946177
  • ಶ್ರೀ ಕೃಷ್ಣಾನಂದ ಪಟಗಾರ, ಮಿರ್ಜಾನ, ಕಾಳುಮೆಣಸಿನ ಬೆಳೆ ಸಲಹೆಗಾರರು - 9741572681

ಭವಿಷ್ಯದ ಸಾಧ್ಯತೆಗಳು


ಕಾಳುಮೆಣಸಿನ ಬೆಳೆಯಲ್ಲಿ ಭವಿಷ್ಯ ಬಹಳ ಉಜ್ವಲವಾಗಿದೆ. ಜಾಗತಿಕ ಬೇಡಿಕೆ ವರ್ಷವರ್ಷಕ್ಕೆ ಹೆಚ್ಚುತ್ತಿದೆ. ಸಾವಯವ  ಬೆಳೆಗೆ ಪ್ರಪಂಚದಾದ್ಯಂತ ಉತ್ತಮ ಮಾರುಕಟ್ಟೆ ಲಭ್ಯವಿದೆ.



ಸೂಚನೆ: ತಕ್ಷಣಕ್ಕೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸ್ಥಳೀಯ ಕೃಷಿ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಿ.

ಇನ್ನೂ ಯಾವ ಬೆಳೆಗೆ ಸಲಹೆ ಬೇಕು ತಿಳಿಸಿ

ಧನ್ಯವಾದಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!