ಕ್ಷೌರಿಕನಿಗೆ ಮುಖ್ಯ ಶಿಕ್ಷಕರು ಬರೆದ ಪತ್ರ ವೈರಲ್: ನೋಡೋಣ ಈವಾಗ್‌ ಮಾಡಿ ಹೆಬ್ಬುಲಿ ಕಟಿಂಗ್‌!!!

hallinews team
0

 ಇತ್ತೀಚಿಗೆ ಫ್ಯಾಷನ್‌ಗಳು ಮಿತಿ ಮೀರಿದೆ ಎನ್ನಬಹುದು. ವೇಷಭೂಷಣಗಳಿಂದ, ತಲೆಯ ಕೇಶ ವಿನ್ಯಾಸದಿಂದ, ಹಾಕಿಕೊಳ್ಳುವ ಆಭರಣಗಳಿಂದ, ಚಪ್ಪಲಿಗಳಿಂದ, ಕೈಕಡಗಳಿಂದ, ತಾವು ಬಳಸುವ ಮೋಟರ್ ಸೈಕಲ್, ಕಾರುಗಳಿಂದ, ಮನೆಗಳಿಂದ, ತಮ್ಮ ಫೋಟೋಗಳಿಂದ  ಹೀಗೆ ಎಲ್ಲೆಲ್ಲಿ ಸಧ್ಯವೋ ಅಲ್ಲೆಲ್ಲಾ  ಫ್ಯಾಷನ್‌ನ್ನು ಜಗತ್ತಿಗೆ ತೋರಿಸುತ್ತಲೇ ಇರುತ್ತಾರೆ.  ಅದು ಅವರಿಗೆ ಇಷ್ಟವಾದರೆ ಸಾಕು ಇತರರಿಗೆ ಕಿರಕಿರಿಯನ್ನುಂಟು ಮಾಡಿದರೂ ಬೇಸರವಿಲ್ಲ!!! ಅನೇಕರಿಗೆಲ್ಲ ಇದು ಪ್ರಶ್ನೆಯೇ ಅಲ್ಲ ಅವರು ತಮಗೆ ಹೇಗೆ ಬೇಕೋ ಹಾಗೆ ಪ್ಯಾಶನ್ ಗಳನ್ನು ಮಾಡುತ್ತಾ ಇರುತ್ತಾರೆ. 

  ಈ ಹೇರ್ ಸ್ಟೈಲ್ ಗಳ ಪ್ಯಾಶನ್ ಇತ್ತೀಚಿಗೆ ಹೆಚ್ಚುತ್ತಾ ಹೋಗಿದೆ. ಹೆಬ್ಬುಲಿ ಹೇರ್‌ ಕಟ್ಟಿಂಗ್‌ ಅಂತ ಬಂದಿದೆ, ಅದು ಹೆಣ್ಣುಮಕ್ಕಳ ನಿದ್ದೆಯನ್ನೂ ಕೆಡಿಸಿವೆ. ಅಂತಾದ್ದರಲ್ಲಿ ಗಂಡುಮಕ್ಕಳಿಗೆ ಅದು ಒಂದು ರೂಢಿಯೇ ಸರಿ.  ಅರ್ಧ ತಲೆಯನ್ನು ಬೋಳಿಸಿ, ನೇರವಾಗಿಸಿಕೊಂಡು, ತಲೆಯಲ್ಲಿ ಗೆರೆಗಳನ್ನು ಎಳೆದುಕೊಂಡು, ಅದನ್ನು ಹುಬ್ಬಿನವರೆಗೂ ಎಳೆದು ತರುವುದು ಇತ್ಯಾದಿಯಾಗಿ ಹಲವಾರು ವೇಷಗಳು ಕಂಡುಬರುತ್ತವೆ. 

ಕನ್ನಡ ಚಿತ್ರನಟ ಸುದೀಪನ ಹೆಬ್ಬುಲಿ ಸಿನಿಮಾ ಬಂದ ನಂತರವಂತು, ಹೆಬ್ಬುಲಿಯಲ್ಲಿ ಪಾತ್ರಕ್ಕಾಗಿ ಮಾಡಿಸಿದಂತ ವಿಶೇಷ ಕೇಶವಿನ್ಯಾಸ ಇಡೀ ದೇಶಾದ್ಯಂತ ಎಲ್ಲರೂ ಕೂಡ ಇದೇ ರಿತಿ ಕತ್ತರಿಸಿಕೊಳ್ಳುವಂತೆ ಮಾಡುತ್ತಿರುವುದು ಸುಳ್ಳಲ್ಲ.  ಈ ಹಿಂದೆ ಕೋರಿಯಾದ ರಾಜನ ಹೇರ್ ಕಟ್ಟು ಕೂಡ ತುಂಬಾ ಪ್ರಸಿದ್ಧಿಯನ್ನು ಪಡೆದಿತ್ತು ಅನ್ನೋದನ್ನ ನೆನಪಿಸಿಕೊಳ್ಳಿ. 

ಹೆಬ್ಬುಲಿಯ ಹೇರ್ ಕಟ್ ಯುವಕರಷ್ಟೇ ಅಲ್ಲದೆ ಶಾಲೆಯ ಹುಡುಗರ ನಿದ್ದೆಯನ್ನು ಕೂಡ ಕೆಡಿಸಿದೆ ಅವರು ತಲೆ ಕೂದಲನ್ನು ಕತ್ತರಿಸಿಕೊಳ್ಳಲು ಹೋದ ಅಂಗಡಿಯವನಿಗೆ ಹೇಳುವುದೇನೆಂದರೆ ನನ್ನ ಕೂದಲನ್ನ ಹೆಬ್ಬುಲಿಯ ತರ ಕತ್ತರಿಸು ಅಂತ. ವಿದ್ಯಾರ್ಥಿಗೆ ತಾನು ವಿದ್ಯಾರ್ಥಿ ಎನ್ನುವ ಒಂದು ಪರಿಕಲ್ಪನೆ ಮರೆತು ಹೋಗುತ್ತದೆ.  ಈ ರೀತಿಯಾದ ಕೇಶವಿನ್ಯಾಸವನ್ನು ಮಾಡಿಕೊಂಡರೆ ತಾನೆ ಏನೋ ಚೆಂದ ಕಾಣುತ್ತೆನೆ,  ಅಟ್ರಾಕ್ಟಿವ್ ವ್ಯಕ್ತಿತ್ವವನ್ನು ಹೊಂದಿದವನಾಗುತ್ತೇನೆ ಅನ್ನುವಂತ ಮನಸ್ಥಿತಿಯನ್ನು ಹೊಂದಿಬಿಡುತ್ತಾರೆ.  ಅದೊಂದು ರೀತಿಯಲ್ಲಿ ಸಮೂಹ ಸನ್ನೆ ಹಿಡಿದ ರೀತಿ ಅಂತ ಅನ್ನಬಹುದು. 

 ಇದಕ್ಕೆ ಸಂಬಂಧಿಸಿದ ಘಟನೆ ಕರ್ನಾಟಕದ ಬಾಗಲಕೋಟೆಯ ಜಿಲ್ಲೆಯಲ್ಲಿ ಕಂಡುಬಂದಿದೆ. ಅಲ್ಲಿ ಒಂದು ಶಾಲೆಯ ಮುಖ್ಯ ಶಿಕ್ಷಕರು ಕೂದಲು ಕತ್ತರಿಸುವ ನಾವೀಗೆ ಒಂದು ಪತ್ರ ಬರೆದು. ತನ್ನ ವಿದ್ಯಾರ್ಥಿಗಳಿಗೆ ಸರಿಯಾಗಿ ಕೂದಲು ಕತ್ತರಿಸು ಎಂದು ಹೇಳುತ್ತಿರುವುದು ಎಲ್ಲಾ ಕಡೆ ವೈರಲಾಗುತ್ತಿದೆ. 

ಪತ್ರದ ಒಕ್ಕಣೆ ಈ ರೀತಿ ಇದೆ:  ನಮ್ಮ ಶಾಲೆಯ ಗಂಡು ಮಕ್ಕಳು "ಹೆಬ್ಬುಲಿ"ಯಂತಹ ಇತರೆ ತರಹದ ಹೇರ್ ಕಟಿಂಗ್, ತಲೆಯ ಒಂದು ಬದಿಗೆ ಕೂದಲು ಬಿಟ್ಟು ಇನ್ನೊಂದು ಬದಿಗೆ ಕೂದಲು ಉಳಿಸಿಕೊಳ್ಳುವುದು ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದು , ಇದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಕೆಗೆ ಆಸಕ್ತಿ ತೋರಿಸದೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡದೆ ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಒಂದು ವೇಳೆ ವಿದ್ಯಾರ್ಥಿಗಳು ಹೆಬ್ಬುಲಿ ಹೇರ್ ಕಟಿಂಗ್ ಮಾಡಲು ನಿಮಗೆ ಒತ್ತಾಯಿಸಿದರೆ ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಅವರ ಪಾಲಕರ ಗಮನಕ್ಕೆ ತರಲು ತಮ್ಮಲ್ಲಿ ಕೋರುತ್ತೇನೆ. ಎಂದು ಸರ್ಕಾರಿ ಪ್ರೌಢಶಾಲೆ ಕುಲಹಳ್ಳಿ, ತಾಲೂಕು: ಜಮಖಂಡಿ ಜಿಲ್ಲೆ: ಬಾಗಲಕೋಟೆಯ ಮುಖ್ಯ ಶಿಕ್ಷಕರಾದ ಶ್ರೀ ಶಿವಾಜಿ ನಾಯಕರವರು ಊರಿನ ಕ್ಷೌರಿಕರಾದ ಶ್ರೀ ಚನ್ನಪ್ಪ ಸಿದರಾಮಪ್ಪ ನಾವಿಯವರಿಗೆ ದಿನಾಂಕ: 20-07-2023 ರಂದು ಪತ್ರ ಬರೆದಿದ್ದಾರೆ. ಈ ರೀತಿಯಾಗಿ ಬರೆದ ಪತ್ರ ವೈರಲ್‌ ಆಗಿದ್ದು, ಶಿಕ್ಷಣ ತಜ್ಞರು, ನಾಯಕರುಗಳು, ಶಿಕ್ಷಕರು, ನಾಡಿನ ಜ್ಞಾನಿಗಳು ತಲೆಕೆಡಿಸಿಕೊಳ್ಳುವಂತಾಗಿದೆ. 

 

ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದೇ ಹಲವರಿಗೆ ಅರಿವು ಬರುತ್ತಿಲ್ಲ. ವ್ಯಕ್ತಿಯಾರಾಧನೆ ಮಾಡುವುದು. ಸುಮ್ಮನೆ ಯಾರೋ ಒಬ್ಬರನ್ನು ಹಿಂಬಾಲಿಸುವುದು ನಡೆಯುತ್ತಿದೆ. ಶಾಲಾ ಶಿಕ್ಷಣದ ಅಡಿಪಾಯವೇ ಅಲುಗಾಡುತ್ತಿದ್ದು, ಜೀವನಕ್ಕೆ ಬೇಕಾದ ಶಿಕ್ಷಣ ದೊರೆಯುತ್ತದೆಯೇ ಎಂಬುದನ್ನ ವಿಶ್ಲೇಷಿಸಬೇಕಿದೆ. 

ಪಠ್ಯ ಪುಸ್ತಕದ ವಿಷಯವಸ್ತುಗಳು ಎಂಬುದು ರಾಜಕೀಯ ಪಕ್ಷಗಳ ಅಜೆಂಡಾ ಆಗಿದೆ ಎಂಬುದೇ ಖೇದಕರ ಸಂಗತಿ. ಈ ರೀತಿ ವಾತಾವರಣ ನಿರ್ಮಿಸುತ್ತಿರುವ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿರುವವರು ಪ್ರಬುದ್ಧವಾಗಿ ತಮ್ಮ ವಿಚಾರಗಳನ್ನ ಸಂಘಟಿಸಬೇಕಿದೆ. ಯಾರದೋ ಓಲೈಕೆಗೆ ಶಾಲಾ ಶಿಕ್ಷಣವಾಗದೆ. ದೇಶ ಮತ್ತು ಸಂಸ್ಕೃತಿಯ ಭದ್ರ ಬುನಾದಿಯನ್ನ ಹಾಕುವಂತಹ ಶಿಕ್ಷಣ ಬೇಕಿದೆ. ಅದು ನಮ್ಮ ಕೈಲಿದೆ ಅಲ್ಲವೇ???

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!