ದುಬೈನಲ್ಲಿ ಬೆದ್ರದ ಬಸ್

hallinews team
0

ಇತ್ತೀಚೆಗೆ ದುಬೈನಲ್ಲಿ ಒಂದು ಬಸ್ಸಿನ ಹಿಂಭಾಗದಲ್ಲಿ "ಬೆದ್ರ" (ಮಂಗಳೂರಿನ ಹತ್ತಿರದ ಗ್ರಾಮ) ಎಂಬ ಕನ್ನಡದ ಬರಹ ಕಾಣಿಸಿಕೊಂಡಿದ್ದು, ಇದು ಸಾಮಾಜಿಕ ಮಾಧ್ಯಮ ಮತ್ತು ಯೂಟ್ಯೂಬ್ #shorts ನಲ್ಲಿ ವೈರಲ್ ಆಗಿದೆ.

@goldenboy_tv_kannada ಎನ್ನುವ ಯೂಟ್ಯೂಬರ್‌ ವಿಡಿಯೋ ಹಾಕಿದ್ದು ನೋಡುಗರನ್ನ ಆಕರ್ಶಿಸುತ್ತಿದೆ.

ಈ ಫೋಟೋವನ್ನು ನೋಡಿದ ಕನ್ನಡಿಗರಲ್ಲಿ ಹೆಮ್ಮೆ ಮತ್ತು ಕುತೂಹಲ ಉಂಟಾಗಿದೆ.

ಬೆದ್ರ ದುಬೈ ಬಸ್ ಫೋಟೋ

ಈಗಾಗಲೇ 3,022,854 ಜನ ನೋಡಿದ್ದು 21K ಲೈಕ್ಸಗಳು ಬಂದಿದೆ, ಇದು 1 Apr 2025 ರಂದು ಪಬ್ಲಿಷ್‌ಗೊಂಡಿರುತ್ತದೆ.

ವೈರಲ್ ಫೋಟೋದ ವಿವರ

ಬಸ್ಸಿನ ಹಿಂಭಾಗದಲ್ಲಿ "ಬೆದ್ರ" (ಮಂಗಳೂರು-ಉಡುಪಿ ಪ್ರದೇಶದ ಗ್ರಾಮ) ಎಂದು ಕನ್ನಡದಲ್ಲಿ ಮುದ್ರಿತವಾಗಿದೆ. ಇದು ದುಬೈನಲ್ಲಿ ಚಲಿಸುತ್ತಿರುವ ಬಸ್ಸು. ಫೋಟೋ #shorts, #Kannada, #Mangaluru ಹ್ಯಾಶ್ಟ್ಯಾಗ್ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹರಡಿದೆ.

ಯೂಟ್ಯೂಬ್ ಕಾಮೆಂಟ್ಗಳನ್ನು ನೋಡುವುದಾದರೆ ಧನಾತ್ಮಕ ಕಮೆಂಟ್‌ಗಳು ಜಾಸ್ತಿ ಬಂದಿದ್ದು ಋಣಾತ್ಮಕ ಕಮೆಂಟ್‌ಗಳು ಕಡಿಮೆ ಇವೆ ಆದರೆ ಕಟುವಾಗಿದೆ.

ಧನಾತ್ಮಕ  ಕಾಮೆಂಟ್ಗಳು (ಅಭಿಮಾನದಿದ ಬರೆದಿದ್ದಾರೆ):

  • "ಬೆಳಗಲಿ ಕನ್ನಡ, ಬೆಳೆಯಲಿ ನಮ್ಮ ಭಾಷೆ ಕನ್ನಡ!" – @Kalakappa-f7y

  • "ನಿಜವಾದ ಕನ್ನಡಿಗ, ನಿಜವಾದ ಭಾರತೀಯ!" – @ambareshav-kv7ke

  • "ಎಲ್ಲಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ❤" – @khanditavaadi8099

  • "ಜೈ ಕನ್ನಡ, ಜೈ ಕರ್ನಾಟಕ!" – @hafeezsharieff4917

ನಕಾರಾತ್ಮಕ ಪ್ರತಿಕ್ರಿಯೆಗಳು:

  • "ಫೋಟೋಶಾಪ್ ಬಂದ ಮೇಲೆ ಎಲ್ಲವೂ ಸುಲಭ 😂" – @vivekk6700

  • "ಎಡಿಟ್ ಮಾಡ್ಕ್ ಬಿಟ್ಟು ಯಾಕೋ ಮಂಗ ಮಾಡ್ತೀಯಾ?" – @autosankar2578

  • "ಬೆದ್ರ ಅನ್ನೋದು ಬದ್ರ ಇರಬೇಕು" – @chethan.m3254

  • "ಫೇಕ್ ಫೋಟೋ" – @BentleyBentley-o7h

ಇದರಲ್ಲಿ ಕನ್ನಡಿಗರ ಪ್ರತಿಕ್ರಿಯೆ ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ, ವಿಡಿಯೋ ಏನೋ ನಮ್ಮೊಳಗೆ ಕನ್ನಡಾಭಿಮಾನವನ್ನ ಉಕ್ಕಿಸಿದರೆ, ಕಮೆಂಟ್‌ಗಳು ಓದೋದಕ್ಕೆ ಮಜವಾಗಿರುತ್ತವೆ. ಕಸ ಎಲ್ಲಾ ಗುಡುಸು ಆದ ಮೇಲೆ ಚಿನ್ನದ ಗುಂಡು ಎಲ್ಲೋ ಬಿದ್ದೋಗಿದೆ ಅಂದಾಗ ಇಡೀ ಕಸದ ಬುಟ್ಟಿಯನ್ನ ಸುರ್ಕೊಂಡು ಕುಂತಾಗ ಒಮ್ಮೊಮ್ಮೆ ಉಪಯುಕ್ತ ಮತ್ತೆ ಅನುಪಯುಕ್ತ ವಸ್ತುಗಳು ಸಿಗುವ ಹಾಗೆ ಕಮೆಂಟ್‌ಗಳು. ಅವರಿಗೆ ಕಮೆಂಟ್‌ ಹಾಕಿ ಅಂತ ಯಾರೂ ಹೇಳಲ್ಲ ಆದರೂ ಇರುವ ಅವಕಾಶ ಬಳಸಿಕೊಂಡು ತಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲಾ ಬರಿತಾ ಹೋಗ್ತಾರೆ. ಅದಕ್ಕೆ ಕೆಲವರು ಕಂಟೆಂಟ್‌ ನೋಡೋದಕಿಂತ ಕಮೆಂಟ್‌ ಓದೋದೇ ಜಾಸ್ತಿ ಅಲ್ಲವೇ?

ಕನ್ನಡ ಭಾಷೆಗೆ ಗ್ಲೋಬಲ್ ಮನ್ನಣೆ ದೊರಕಿದಂತಹ ಈ ಘಟನೆಯು ಕನ್ನಡಿಗರಲ್ಲಿ ಹೆಮ್ಮೆಯನ್ನು ಉಂಟುಮಾಡಿದೆ. "ಬೆದ್ರ" ಎಂಬ ಸಣ್ಣ ಗ್ರಾಮದ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಅಂದರೆ ಬರೆಸಿದವನ ಕನ್ನಡಾಭಿಮಾನ ಎಷ್ಟೆತ್ತರದ್ದು ಅಲ್ಲವಾ!!

ಈ ಫೋಟೋ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಒಂದು ಸಾಂಕೇತಿಕ ಗೌರವವಾಗಿದೆ. "ಬೆದ್ರ ದುಬೈ ಬಸ್" ಈಗ ಕನ್ನಡಿಗರ ಹೆಮ್ಮೆಯ ಸಂಕೇತವಾಗಿದೆ!

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!