ಭಾರತೀಯ ಬಂದರು ಕಾಯ್ದೆ, 2025

Halli News team
0

ಭಾರತದ ಧೈರ್ಯದ ಸಮುದ್ರಗಾಮಿ ಕಾನೂನು

ಮುಖ್ಯ ಅಂಶಗಳು:

  • 1908ರ ಹಳೆಯ ಬಂದರು ಕಾಯ್ದೆಯನ್ನು ಬದಲಿಸಿ The Indian Ports Act, 2025 ಎಂಬ ಸಮಕಾಲೀನ ನಿಯಮಗಳನ್ನು ತಂದಿದೆ.
  • Maritime State Development Council (MSDC) ಅನ್ನು ಸ್ಥಾಪಿಸಿ, ಕೇಂದ್ರ–ರಾಜ್ಯಗಳ ನಡುವೆ ಸಮನ್ವಯಕ್ಕೆ ಅವಕಾಶ ನೀಡಿದೆ.
  • ಬಂದರುಗಳಲ್ಲಿ ಹಸಿರು ಮಾನದಂಡಗಳು, ವಿಪತ್ತು ಸಿದ್ಧತೆ ಕಡ್ಡಾಯಗೊಳಿಸಿದೆ.
  • ಬಂದರು ಪ್ರಕ್ರಿಯೆಗಳನ್ನು ಸರಳಗೊಳಿಸಿ, ಡಿಜಿಟಲೀಕರಣ ಮೂಲಕ Ease of Doing Business ಹೆಚ್ಚಿಸಿದೆ.
  • ಭಾರತೀಯ ಬಂದರು ಕಾಯ್ದೆ 2025 – ಹೊಸ ದಿಕ್ಕು

THE INDIAN PORT ACT 2025

ಭಾರತದ 7,500 ಕಿ.ಮೀ ಕರಾವಳಿ ಮತ್ತು 200ಕ್ಕೂ ಹೆಚ್ಚು ಬಂದರುಗಳು ದೇಶದ ವ್ಯಾಪಾರ, ಕೈಗಾರಿಕಾ ಬೆಳವಣಿಗೆಗೆ ಜೀವನಾಡಿಯಂತೆ ಕಾರ್ಯನಿರ್ವಹಿಸುತ್ತಿವೆ. 95% ರಫ್ತು–ಆಮದು ಸರಕು (ಪರಿಮಾಣದ ದೃಷ್ಟಿಯಿಂದ) ಬಂದರುಗಳ ಮೂಲಕ ಸಾಗುತ್ತದೆ. ಈ ಹಿನ್ನೆಲೆ, 2025ರಲ್ಲಿ ಅಂಗೀಕೃತವಾದ ಹೊಸ ಕಾಯ್ದೆ ಬಂದರುಗಳನ್ನು ಕೇವಲ ಸಾರಿಗೆ ಕೇಂದ್ರಗಳಷ್ಟೇ ಅಲ್ಲದೆ, ಆರ್ಥಿಕ ಬೆಳವಣಿಗೆಯ ಎಂಜಿನ್‌ಗಳಾಗಿ ಪರಿವರ್ತಿಸುವುದಕ್ಕೆ ದಾರಿ ಮಾಡಿಕೊಡುತ್ತದೆ.

INDIAN PORTS PLAY IMPORTANT ROLE

ಬಂದರುಗಳ ಪ್ರಾಮುಖ್ಯತೆ: 

 ದೇಶದ ೯೫% ಸರಕು ಸಾಗಣೆ ಬಂದರುಗಳ ಮೂಲಕ 

 ೧೨ ಪ್ರಮುಖ ಬಂದರು + ೨೦೦ಕ್ಕೂ ಹೆಚ್ಚು ಸಣ್ಣ ಬಂದರುಗಳು 

 ಇವು ಕೋಟಿ ಜನರಿಗೆ ಉದ್ಯೋಗ ನೀಡುತ್ತವೆ


ಕಾಯ್ದೆಯ ಪ್ರಮುಖ ಸುಧಾರಣೆಗಳು: 

🛳️ ಬಂದರು ಅಧಿಕಾರಿಗಳು

ಕಾನ್ಸರ್ವೇಟರ್‌ಗೆ ಹೆಚ್ಚಿನ ಅಧಿಕಾರ, ರೋಗ ನಿಯಂತ್ರಣ, ಹಾನಿ ಮೌಲ್ಯಮಾಪನ, ದಂಡ ವಿಧಿಸುವ ಹೊಸ ಜವಾಬ್ದಾರಿಗಳು.

⚖️ ಕಾನೂನುಬದ್ಧ ಸಂಸ್ಥೆಗಳು

ರಾಜ್ಯ ಸಮುದ್ರ ಮಂಡಳಿಗಳು: ಸಣ್ಣ ಬಂದರುಗಳ ನಿರ್ವಹಣೆ, ಅಭಿವೃದ್ಧಿ, ಶುಲ್ಕ ನಿಯಂತ್ರಣ.

MSDC: ರಾಷ್ಟ್ರೀಯ ಮಟ್ಟದ ಯೋಜನೆ, ನೀತಿ ಸಲಹೆ, ಡೇಟಾ ಪಾರದರ್ಶಕತೆ.

🔎 ವಿವಾದ ಪರಿಹಾರ

ಪ್ರತಿ ರಾಜ್ಯದಲ್ಲಿ Dispute Resolution Committees, ಮೇಲ್ಮನವಿಗೆ ಹೈಕೋರ್ಟ್‌ ಅವಕಾಶ. ತ್ವರಿತ ಪರಿಹಾರಕ್ಕೆ arbitration ಆಯ್ಕೆ.

💰 ಶುಲ್ಕ ನಿಯಂತ್ರಣ

ಮುಖ್ಯ ಬಂದರುಗಳಿಗೆ Major Port Authority Board, ಸಣ್ಣ ಬಂದರುಗಳಿಗೆ State Maritime Board ಶುಲ್ಕ ನಿಗದಿ. ಎಲ್ಲ ಶುಲ್ಕಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ ನಿಬಂಧನೆ.

🌍 ಭದ್ರತೆ ಮತ್ತು ಪರಿಸರ

ಅಂತಾರಾಷ್ಟ್ರೀಯ ಮಾನದಂಡ (MARPOL, Ballast Water Management) ಅನುಸರಣೆ. ಮಾಲಿನ್ಯ ನಿಯಂತ್ರಣ, ತುರ್ತು ಯೋಜನೆಗಳು, ಸುರಕ್ಷತಾ ಕ್ರಮಗಳಿಗೆ ದಂಡ ನಿಬಂಧನೆ.

INDIA'S MARITIME SURGE


ಪರಿಣಾಮ ಮತ್ತು ಮಹತ್ವ: 

ಕಾನೂನು ಏಕೀಕರಣ: ದೇಶದ ಬಂದರು ಕಾನೂನುಗಳನ್ನು ಒಂದೇ ಚೌಕಟ್ಟಿಗೆ ತರಲು.

ಸಂಸ್ಥಾತ್ಮಕ ಶಕ್ತಿ: ರಾಜ್ಯ ಮಂಡಳಿಗಳು ಮತ್ತು MSDC ಮೂಲಕ ಸಮನ್ವಯ.

ಪರಿಸರ–ಭದ್ರತೆ: ಮಾಲಿನ್ಯ ನಿಯಂತ್ರಣ, ದುರಂತ ನಿರ್ವಹಣೆ, ಹಸಿರು ಬಂದರು ಅಭ್ಯಾಸಗಳು.

Ease of Doing Business: ಡಿಜಿಟಲೀಕರಣ, ದ್ರುತ ಪರಿಹಾರ, ಪಾರದರ್ಶಕತೆ.

Ease of Doing Business: ವ್ಯಾಪಾರಿಗಳಿಗೆ ಸುಲಭ.

ಪರಿಸರ ರಕ್ಷಣೆ ಇದರಿಂದ ಸಾಧ್ಯ, ಕಾಯ್ದೆಗೆ ಮಹತ್ವ.

ರಾಜ್ಯಗಳಿಗೆ ಹೆಚ್ಚು ಅಧಿಕಾರ ಮತ್ತು ವೇಗವಾದ ಅಭಿವೃದ್ಧಿ.


ಕೊನೆ ಮಾತು:

ಭಾರತೀಯ ಬಂದರು ಕಾಯ್ದೆ, 2025 – ಶತಮಾನ ಹಳೆಯ ಕಾನೂನಿಗೆ ಬದಲಾವಣೆ ತಂದು, ಭವಿಷ್ಯೋನ್ಮುಖ ಬಂದರು ಆಡಳಿತಕ್ಕೆ ದಾರಿ ತೋರಿದೆ. ಇದು ಕೇಂದ್ರ–ರಾಜ್ಯಗಳ ಸಹಭಾಗಿತ್ವ ಬಲಪಡಿಸಿ, ಹೂಡಿಕೆ ಆಕರ್ಷಿಸಿ, ಬಂದರುಗಳನ್ನು ವಿಕಸಿತ ಭಾರತ 2047 ಗುರಿಯತ್ತ ಸಾಗಿಸುವ ಪ್ರಮುಖ ಹೆಜ್ಜೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!