೦೧
ಚಿಂತ್ಯಾಕೆ ಮಾಡುತಿದ್ದಿ - ಭೈರವನಿದ್ದಾನೆ
ಚಿಂತ್ಯಾಕೆ ಮಾಡುತಿದ್ದಿ ಭೈರವನಿದ್ದಾನೆ
ಭೈರವನಿದ್ದಾನೆ
ನಿನ್ನ ಚಿಂತೆಯ ಬಿಡಿಸೋ ಗೌರಿಕಾಂತನಿದ್ದಾನೆ
ಗೌರಿಕಾಂತನಿದ್ದಾನೆ
||ಚಿಂತ್ಯಾಕೆ||
ಎಳ್ಳು ಕೊನೆಯೂ ಮುಳ್ಳು ಮೊನೆಯು
ಎಲ್ಲಾ ಬಿಡದೆ ಒಳಗೆ ಹೊರಗೆ
ಎಲ್ಲಾ ಠಾವಿನಲ್ಲೂ ಗೌರಿವಲ್ಲಭನಿದ್ದಾನೆ
ಗೌರಿವಲ್ಲಭನಿದ್ದಾನೆ
||ಚಿಂತ್ಯಾಕೆ||
ಹಿಂದೆ ನಿನ್ನ ಸಲಹಿದರ್ಯಾರೋ
ಮುಂದೆ ನಿನ್ನ ಸಲಹುವರ್ಯಾರೋ
ಅಂದಿಂದೆಂದಿಗೂ ನಂದಿವಾಹನನಿದ್ದಾನೆ
ನಂದಿವಾಹನನಿದ್ದಾನೆ
||ಚಿಂತ್ಯಾಕೆ||
ನಾನು ನೀನು ಎಂಬ ಉಭಯ
ಹೀನಗುಣಗಳೆಲ್ಲಾ ಕಳೆದೂ
ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ
ಸುಖ ಸಂಪೂರ್ಣನಿದ್ದಾನೆ
||ಚಿಂತ್ಯಾಕೆ||
ಗೌರಿಕಾಂತನಿದ್ದಾನೆ
ಗೌರಿವಲ್ಲಭನಿದ್ದಾನೆ
ನಂದಿವಾಹನನಿದ್ದಾನೆ
ಸುಖ ಸಂಪೂರ್ಣನಿದ್ದಾನೆ
ಸ್ವಾಮಿ ಭೈರವನಿದ್ದಾನೆ
📖 ಹಾಡಿನ ಮಹತ್ವ
ಈ ಭಕ್ತಿಗೀತೆಯು ಭಗವಾನ್ ಭೈರವ (ಶಿವ) ಸರ್ವವ್ಯಾಪಿ ಎಂಬ ಸತ್ಯವನ್ನು ಸಾರುತ್ತದೆ. ಚಿಂತಿಸಬೇಡ ಎಂದು ಹೇಳುತ್ತಾ, ಭೈರವ, ಗೌರಿಕಾಂತ, ನಂದಿವಾಹನ - ಇವರು ಪ್ರತಿಯೊಂದು ಅಣುವಿನಲ್ಲೂ, ಒಳಗೂ ಹೊರಗೂ ಇದ್ದಾರೆ ಎಂದು ವಿವರಿಸುತ್ತದೆ. "ನಾನು ಮತ್ತು ನೀನು" ಎಂಬ ದ್ವೈತ ಭಾವವನ್ನು ಕಳೆದು, ಪೂರ್ಣ ಜ್ಞಾನಾನಂದದತ್ತ ಕೊಂಡೊಯ್ಯುವ ಈ ಹಾಡು ಭಕ್ತರಿಗೆ ಧೈರ್ಯ ತುಂಬುತ್ತದೆ.
🔍 ಹುಡುಕು ಪದಗಳು
೦೨
ಶಿವ ಶಿವ ಎಂದರೆ ಭಯವಿಲ್ಲಾ
ಶಿವ ಶಿವ ಎಂದರೆ ಭಯವಿಲ್ಲಾ..ಆ..ಆ
ಶಿವ ಶಿವ ಎಂದರೆ ಭಯವಿಲ್ಲಾ,
ನಾಮಕೆ ಸಾಟಿ ಬೇರಿಲ್ಲಾ,
ಶಿವ ನಾ..ಮಕೆ ಸಾಟಿ ಬೇರಿಲ್ಲಾ..
ಶಿವಭಕ್ತನಿಗೆ ನರಕಾ ಇಲ್ಲಾ...ಆ..ಅ
ಶಿವಭಕ್ತನಿಗೆ ನರಕಾ ಇಲ್ಲಾ,
ಜನುಮ ಜನುಮಗಳ ಕಾಟವೆ ಇಲ್ಲಾ,
ಶಿವ ಶಿವ ಎಂದರೆ ಭಯವಿಲ್ಲಾ,
ನಾಮಕೆ ಸಾಟಿ ಬೇರಿಲ್ಲಾ,
ಶಿವ ನಾ.ಮಕೆ ಸಾಟಿ ಬೇ..ರಿಲ್ಲಾ..
♬ ♬ ♪ ♪ ♬ ♬ ♪ ♪ ♬ ♬
ಅನ್ನ ದಾನವ ತೊರೆಯದಿರು..
ನಾನು ನನ್ನದು ಎನ್ನ..ದಿರು...
ಅನ್ನ ದಾನವ ತೊರೆಯದಿರು..ಉ
ನಾನು ನನ್ನದು ಎನ್ನದಿರು...
ಉನ್ನತಿ ಸಾಧಿಸೆ ಹಗಲಿರುಳು...ಉ..ಊ..ಉ
ಉನ್ನತಿ ಸಾಧಿಸೆ ಹಗಲಿರುಳು,
ದೀ..ನಾನಾಥನ ಮರೆಯದಿರು...ಉ
ಶಿವ ಶಿವ ಎಂದರೆ ಭಯವಿಲ್ಲಾ...
♬ ♬ ♪ ♪ ♬ ♬ ♪ ♪ ♬ ♬
ಭೊಗ ಭಾಗ್ಯದಾ ಬಲೆಯೊಳಗೆ,
ಬಳಲಿ ಬಾಡದೆ ಇಳೆಯೊಳಗೆ...
ಭೊಗ ಭಾಗ್ಯದಾ ಬಲೆಯೊಳಗೆ...ಎ
ಬಳಲಿ ಬಾಡದೆ ಇಳೆಯೊಳಗೆ,
ಕಾಯಕ ಮಾಡುತ ಎಂದೆಂದೂ...ಉ..ಊ..ಉ
ಕಾಯಕ ಮಾಡುತ ಎಂದೆಂದು,
ಆ..ತ್ಮಾನಂದವ ಸವಿಯುತಿರು..ಉ..ಉ
ಶಿವ ಶಿವ ಎಂದರೆ ಭಯವಿಲ್ಲಾ...
♬ ♬ ♪ ♪ ♬ ♬ ♪ ♪ ♬ ♬
ದಾನವೆ ಜಗದೊಳು ತಪವಯ್ಯ..ಅ
ಧ್ಯಾನವೆ ಘನಕರ ಜಪವಯ್ಯ...
ದಾನವೆ ಜಗದೊಳು ತಪವಯ್ಯ...ಅ
ಧ್ಯಾನವೆ ಘನಕರ ಜಪವಯ್ಯ,
ಅಪಕಾರವ ನೀ ಮಾಡಿದರೇ..ಎ..ಏ.ಏ..ಎಎಎ
ಅಪಕಾರವ ನೀ ಮಾಡಿದರೆ,
ಕೈಲಾಸವದು ಸಿಗದಲ್ಲಾ..ಆಅ
ಶಿವ ಶಿವ ಎಂದರೆ ಭಯವಿಲ್ಲಾ...
ಶಿವ ನಾ...ಮಕೆ ಸಾಟಿ ಬೇ..ರಿ.ಲ್ಲಾ...
📖 ಹಾಡಿನ ಮಹತ್ವ
ಕನ್ನಡ ಚಿತ್ರರಂಗದ ಅತ್ಯಂತ ಪ್ರಸಿದ್ಧ ಶಿವ ಭಕ್ತಿಗೀತೆಗಳಲ್ಲಿ ಇದೂ ಒಂದು. "ಶಿವ" ಎಂದು ಜಪಿಸಿದರೆ ಎಲ್ಲ ಭಯಗಳು ನಿವಾರಣೆಯಾಗುತ್ತವೆ, ಶಿವನಾಮಕ್ಕೆ ಸಾಟಿ ಬೇರಿಲ್ಲ, ಶಿವಭಕ್ತನಿಗೆ ನರಕವಿಲ್ಲ, ಜನ್ಮ-ಜನ್ಮಾಂತರಗಳ ಕಾಟವಿಲ್ಲ ಎಂದು ಸಾರುತ್ತದೆ. ಅನ್ನದಾನ, ನಿರಹಂಕಾರ, ಕಾಯಕ, ಮತ್ತು ಕೃತಘ್ನತೆಯ ದೋಷದ ಬಗ್ಗೆ ಎಚ್ಚರಿಸುವ ಈ ಹಾಡು ಜೀವನಮೌಲ್ಯಗಳನ್ನು ಬೋಧಿಸುತ್ತದೆ.
🔍 ಹುಡುಕು ಪದಗಳು
೦೩
ಮಾದೇವ, ಮಾದೇವ (ಸೂಜು ಮಲ್ಲಿಗೆ)
ಮಾದೇವ, ಮಾದೇವ
ಮಾದೇವ, ಮಾದೇವ
ಮಾದೇವ
ಮಾದೇವ
ಸೋಜುಗಾದ ಸೂಜುಮಲ್ಲಿಗೆ
ಮಾದೇವ, ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗಾದ ಸೂಜುಮಲ್ಲಿಗೆ
ಮಾದೇವ, ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ನ ಪೂಜೆಗೆ ಬಂದು ಮಾದೇವ ನಿಮ್ಮ
ಸೋಜುಗಾದ ಸೂಜುಮಲ್ಲಿಗೆ
ಮಾದೇವ, ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ತಪ್ಪಾಳೆ ಬೆಳಗ್ಯಿವ್ನಿ ತುಪ್ಪಾವ ಕಾಯ್ಸಿವ್ನಿ
ಕಿತ್ತಾಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದಿವ್ನಿ ಮಾದಪ್ಪ
ಕಿತ್ತಾಡಿ ಬರುವ ಪರಸೆಗೆ ಮಾದೇವ ನಿಮ್ಮ
ಸೋಜುಗಾದ ಸೂಜುಮಲ್ಲಿಗೆ
ಮಾದೇವ, ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಬೆಟ್ ಹತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ?
ಬೆಟ್ಟದ್ ಮಾದೇವ ಗತಿಯೆಂದು ಮಾದೇವ ನೀವೇ
ಮಾದೇವ ನೀವೇ
ಮಾದೇವ ನೀವೇ
ಬೆಟ್ ಹತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ?
ಬೆಟ್ಟದ್ ಮಾದೇವ ಗತಿಯೆಂದು ಮಾದೇವ ನೀವೇ
ಬೆಟ್ಟದ್ ಮಾದೇವ ಗತಿಯೆಂದು ಅವರಿನ್ನು
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ
ಉಚ್ಚೆಳ್ಳು ಹೂವ್ನಂಗೆ ಹೆಚ್ಚೇವೋ ನಿನ್ನ ಪರುಸೆ
ಹೆಚ್ಚಾಳಗಾರ ಮಾದಯ್ಯ, ಮಾದಯ್ಯ ನೀನೇ
ಹೆಚ್ಚಾಳಗ್ಯಾರ ಮಾದಯ್ಯ ಏಳುಮಲೆಯ
ಹೆಚ್ಚೆವು ಕೌದಳ್ಳಿ ಕಣಿವೇಲಿ ಮಾದೇವ ನಿಮ್ಮ
ಸೋಜುಗಾದ ಸೂಜುಮಲ್ಲಿಗೆ
ಮಾದೇವ, ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
📖 ಹಾಡಿನ ಮಹತ್ವ
ಶ್ರೀ ಮಲ್ಲಿಕಾರ್ಜುನ (ಮಾದೇವ)ನನ್ನು ಕುರಿತ ಸುಂದರವಾದ ಜಾನಪದ ಶೈಲಿಯ ಭಕ್ತಿಗೀತೆ. ಸೋಜುಗದ ಸೂಜು ಮಲ್ಲಿಗೆ, ದುಂಡು ಮಲ್ಲಿಗೆ, ತಾವರೆ, ತುಳಸಿ, ಕಿತ್ತಾಳೆ ಹಣ್ಣು ಮುಂತಾದವುಗಳನ್ನು ಅರ್ಪಿಸಿ ಭಕ್ತಿಯಿಂದ ಪೂಜಿಸುವ ಭಾವವನ್ನು ವ್ಯಕ್ತಪಡಿಸುತ್ತದೆ. ಗ್ರಾಮೀಣ ಕರ್ನಾಟಕದ ನಿಷ್ಕಲ್ಮಶ ಭಕ್ತಿಯ ಪ್ರತೀಕವಾದ ಈ ಹಾಡು, ಭಕ್ತರು ಬೆಟ್ಟದ ಮಾದೇವನನ್ನೇ ಗತಿ ಎಂದು ಭಾವಿಸಿ ಲೌಕಿಕ ಆಸೆಗಳನ್ನು ಮರೆಯುವ ತ್ಯಾಗಮಯ ಭಕ್ತಿಯನ್ನು ಚಿತ್ರಿಸುತ್ತದೆ.
🔍 ಹುಡುಕು ಪದಗಳು
೦೪
ಶಿವಪ್ಪ ಕಾಯೋ ತಂದೆ
ಓಂಕಾರ ಓಂಕಾರ, ಓಂ ಓಂಕಾರನಾದ ರೂಪ
ಮೋರೆಯ ನೀ ಆಲಿಸಿ, ಪಾಲಿಸೋ ಸರ್ವೇಶಾ
ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ, ಕಾಪಡೆಯ
ಭಕ್ತಿಯಂತೆ ಪೂಜೆಯಂತೆ, ಒಂದು ಅರಿಯೆ ನಾ
ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ
ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ ಕಾಪಡೆಯ
ಶುದ್ಧನಾಗಿ ಪೂಜೆ ಗೈಯ್ಯೇ ಒಲಿವೆಯಂತೆ ನೀ
ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ
ನಾದವಂತೆ ವೇದವಂತೆ ಒಂದು ತಿಳಿಯೆ ನಾ
ಬೆಂದ ಜೀವ ಮುಂದು ಕೂತೆ ಬಂದು ನೋಡಯ್ಯ
ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ ಕಾಪಡೆಯ
ಏಕ ಶ್ರದ್ಧದೀ ನಂಬಿದವರ ನೀ ಸಾಕಿ ಸಲಹುವೇ ಎಂತಪ್ಪ
ಶೋಕವ ಹರಿಸುವ ದೇವ ನೀನಾದರೆ ಬೇಟೆಯ ತೋರೊ ಎನ್ನಪ್ಪ
ಲೋಕವನಾಳುವ ನೀನಪ್ಪಾ ಬೇಟೆಯ ತೋರೊ ಎನ್ನಪ್ಪ
ಬೇಟೆಯ ತೋರೊ ಎನ್ನಪ್ಪ
📖 ಹಾಡಿನ ಮಹತ್ವ
"ಬೇಡರ ಕಣ್ಣಪ್ಪ" ಚಿತ್ರದ ಈ ಹೃದಯಸ್ಪರ್ಶಿ ಪ್ರಾರ್ಥನೆಯು ಶಿವನ ಪರಮ ಭಕ್ತ ಕಣ್ಣಪ್ಪನ ನಿಷ್ಕಲ್ಮಶ ಭಕ್ತಿಯನ್ನು ಪ್ರದರ್ಶಿಸುತ್ತದೆ. ಬೇಡನಾದ ಕಣ್ಣಪ್ಪನಿಗೆ ಪೂಜಾವಿಧಿಗಳು ಗೊತ್ತಿಲ್ಲ. ತನ್ನ ಬಳಿ ಇರುವುದನ್ನೇ ಶಿವನಿಗೆ ಅರ್ಪಿಸುತ್ತಾನೆ. "ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ" ಎಂಬ ಸಾಲು ಭಕ್ತಿಯ ಮರ್ಮವನ್ನು ಬಿಚ್ಚಿಡುತ್ತದೆ - ಭಾವಶುದ್ಧಿಯೇ ಮುಖ್ಯ, ಆಚರಣೆಯಲ್ಲ. ಭಗವಂತ ಪ್ರೀತಿಯನ್ನೇ ಸ್ವೀಕರಿಸುತ್ತಾನೆ ಎಂಬ ಸಂದೇಶವನ್ನು ಈ ಹಾಡು ಸಾರುತ್ತದೆ.
🔍 ಹುಡುಕು ಪದಗಳು
