Spooky College

Halli News team
0

ಸ್ಪೂಕಿ ಕಾಲೇಜ್‌: ಸಿನೇಮಾ ಬಿಡುಗಡೆಯ ಕುತೂಹಲ

     ಹೊಸದಾಗಿ ಟೀಸರ್ ಬಿಡುಗಡೆ ಮಾಡಿ ಅಪಾರ ಜನಮನ್ನಣೆ ಜೊತೆಗೆ ಜನರಲ್ಲಿ ಕೂತುಹಲವನ್ನು ಮೂಡಿಸಿದ  ನಮ್ಮ ಕನ್ನಡ ಸಿನಿಮಾ "ಸ್ಪೂಕಿ ಕಾಲೇಜ್ ". ಚಲನಚಿತ್ರದ ಹೆಸರೇ ಸ್ವಲ್ಪ ಗೊಂದಲಕ್ಕೆ ಈಡುಮಾಡುವಂತಿದ್ದರೆ  ಟೀಸರ್ ಇನ್ನೂ ಹೆಚ್ಚಿನ ಕೂತೂಹಲ ಮೂಡಿಸುತ್ತದೆ. 

    ಇತ್ತೀಚಿನ ದಿನಗಳಲ್ಲಿ ದಿನ ನಿತ್ಯ ತಮ್ಮ ಕಾರ್ಯ ವೈಖರಿಗಳಲ್ಲಿ  ಭಾಗಿಯಾಗುವ ಜನರ ಗಮನವನ್ನು ಸೆಳೆಯಲು ಚಲನ ಚಿತ್ರಗಳನ್ನು ತುಂಬಾ ವಿಷೇಷ ರೀತಿಯಲ್ಲಿ ಚಿತ್ರಿಸಬೇಕಾಗುತ್ತದೆ. ಅದರಲ್ಲಿ ರಹಸ್ಯದ ಚಿತ್ರಗಳು, ಐತಿಹಾಸಿಕ ಚಿತ್ರಗಳು, ಹಾರರ್ ಚಿತ್ರಗಳು ಮುಖ್ಯ ಪಾತ್ರವಹಿಸುತ್ತವೆ.  

    ಅನೇಕ ಹಾರರ್ ಚಲನಚಿತ್ರಗಳನ್ನು ಚಿತ್ರಿಸಿದ ಕನ್ನಡ ಸಿನೆಮಾ ಇಂಡಸ್ಟ್ರಿ ಈಗ ಹೊಸದೊಂದು ಕಥೆಯನ್ನು ಆರಿಸಿ ಹೊಸ ರೀತಿಯಲ್ಲಿ ರಹಸ್ಯ, ಹಾಸ್ಯ, ಹಾರರ್ ಮೂರು ಅಂಶಗಳನ್ನು ಬೆರೆಸಿ ಹೆಣೆದ ಕಥೆಯೇ "ಸ್ಪೂಕಿ ಕಾಲೇಜ್" .

    ಭರತ್ ಜಿ ಅವರ ನಿರ್ದೇಶನದಲ್ಲಿ ಚಿತ್ರಿಸಿದ ಈ ಕಥೆಗೆ ಪ್ರೋಡ್ಯುಸರ್ ಆಗಿ 2015 ರಲ್ಲಿ ಜನಮನ್ನಣೆ ಪಡೆದು "ಫಿಲಂಫೇರ್ ಅವಾರ್ಡ್ ಫಾರ್ ಬೆಸ್ಟ್ ಫಿಲ್ಮ್" ಪ್ರಶಸ್ತಿ ಮೂಡಿಗೆರಿಸಿಕೊಂಡ ರಂಗಿತರಂಗ ಚಿತ್ರದಲ್ಲಿ ತಮ್ಮ ಪಾತ್ರದಿಂದ ಅಪಾರ ಗೌರವ ಸಂಪಾದಿಸಿದ್ದ ಎಚ್. ಕೆ ಪ್ರಕಾಶ್ ರವರು ಕಾರ್ಯ ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ನಟಿಸಿದ ವಿವೇಕ್ ಸಿಂಹ ಅವರನ್ನು ಹೀರೋ ಆಗಿ ನಾವಿಲ್ಲಿ ಕಾಣಬಹುದು. ಜೊತೆಗೆ ದಿಯಾ ಚಲನಚಿತ್ರದಲ್ಲಿ ನಟಿಸಿ ಪ್ರಸಿದ್ಧತೆ ಪಡೆದ ಖುಷಿ ರವಿ ಅವರನ್ನು ನಾವಿಲ್ಲಿ "ಸೆಂಟರ್ ಆಫ್ ಅಟ್ರಾಕ್ಷನ್" ಎಂಬ ಪಾತ್ರದಂತೆ ಕಾಣಬಹುದು. 

    ಮುಖ್ಯವಾಗಿ ಹೇಳಬೇಕೆಂದರೆ ಈ ಕಥೆಗೆ ರೆಕ್ಕೆ ಗರಿಗಳಿಗಿಂತ ಹಕ್ಕಿಯೊಂದು ಬೇಕಾಗಿತ್ತು. ಎಂದರೆ ಚಿತ್ರೀಕರಣದ ಸ್ಥಳ. ಜನರ ಗಮನ ಸೆಳೆದು, ಭಯದ ವಾತಾವರಣ ಸ್ತೃಷ್ಟಿಸುವಂತದ್ದು ಆಗಿರಬೇಕಿತ್ತು. ಆದ್ದರಿಂದ ನೂರು ವರ್ಷಕ್ಕೂ ಹಳೆಯದಾದ ಬ್ರಿಟಿಷರ ಕಾಲಾವಧಿಯಲ್ಲಿ ಕಟ್ಟಿಸಿದ ಧಾರವಾಡದಲ್ಲಿರುವ ಕರ್ನಾಟಕ ಕಲಾ ಮಹಾವಿದ್ಯಾಲಯವನ್ನು ಆರಿಸಿ ಸಂಪೂರ್ಣ ಚಿತ್ರೀಕರಣ ಅಲ್ಲಿಯೇ ಮಾಡಲಾಗಿದೆ. ಹಳೆಯ ಈ ಬಿಲ್ಡಿಂಗನ್ನು ಹಾರರ್ ಬಿಲ್ಡಿಂಗ್ ರೂಪವಾಗಿ ಪರಿವರ್ತಿಸಿ ಅಲ್ಲಿ ಕಲಿಯುವ ವಿದ್ಯಾರ್ಥಿಗಳನ್ನೆ ಬೆರಗು ಮೂಡಿಸುವಷ್ಟು ಕಥೆಯನ್ನು ಹೆಣೆದಿದ್ದಾರೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದ "ಸ್ಪೂಕಿ ಕಾಲೇಜ್" ಜನವರಿ 6 ಕ್ಕೆ ರಾಜ್ಯಾದ್ಯಂತ ಬಿಡುಗೆಯಾಗುತ್ತಿದೆ ಜನರೆಲ್ಲ ಉತ್ಸಾಹದಿಂದ ಈ ಕಥೆಗಾಗಿ ಕಾಯುತ್ತಿದ್ದಾರೆ.


 

ಬರಹ / ವಿಶ್ಲೇಷಣೆ:

ಲಕ್ಷ್ಮೀ ಪವಾರ

ತಿನೈಘಾಟ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!