ನಾಯರ್ ಸರ್ ನೆನಪಿನ ಶ್ರದ್ಧಾಂಜಲಿ

hallinews team
1
Nair Sir Memorial Photo

ನಾಯರ್ ಸರ್ ಅವರನ್ನು ಮರೆಯಲಾಗದು

ಹೊನ್ನಾವರ : ಎಸ್ ಡಿ ಎಂ ಕಾಲೇಜಿನ ದಿನ ನೆನಪಾದಾಗ, ಇಂಗ್ಲೀಷ್ ಪಾಠ ಮಾಡುತ್ತಿದ್ದ ನಾಯರ್ ಸರ್ ನೆನಪಿಗೆ ಬಂದೇ ಬರುತ್ತಾರೆ. ಅವರ ಇಂಗ್ಲೀಷ್ ಶಬ್ದ ಉಚ್ಚಾರವೇ ಆಕರ್ಷಣೆಯಾಗಿದ್ದು, ಪಾಠ ಮಾಡಲು ತಾಳ್ಮೆಯಲ್ಲೂ ಮಾದರಿ.

"ಕೇಳಲು ಮನಸ್ಸಿಲ್ಲ ಅಂದ್ರೆ ನಿದ್ದೆ ಮಾಡಿ, ಏನು ಹೇಳಿಲ್ಲ, ಆದರೆ ಡಿಸ್ಟರ್ಬ್ ಮಾಡಬೇಡಿ" ಎನ್ನುವ ಅವರ ಮಾತುಗಳಿಂದ ಅಂಥ ಪ್ರಾಮಾಣಿಕತೆ ಸ್ಪಷ್ಟವಾಗುತ್ತಿತ್ತು.

ಅವರು ಕಲಿಸಿದ ದಿ ಮರ್ಚೆಂಟ್ ಆಫ್ ವೆನಿಸ್ ಹಾಗೂ ದಿ ಬರ್ಡ್ಸ್ ಎಂಬ ಪಾಠಗಳು ಇನ್ನೂ ಮನಸಿನಲ್ಲಿ ತಾಜಾಗಿ ಉಳಿದಿವೆ.

"ಕೈಯಲ್ಲಿ ಕನ್ನಡಕ, ಕರ್ಚಿಪ್ ಹಿಡಿದು ತಲೆಯ ಸವರಿ, ಶಿಸ್ತಿನ ಪರಿ, ಆತ್ಮೀಯತೆಯ ವ್ಯಕ್ತಿತ್ವ... ಎಲ್ಲವೂ ಮಾದರಿಯಾಗಿತ್ತು"

ಅವರು ಎಸ್ ಡಿ ಎಂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಸರಳ ಜೀವನ ಶೈಲಿ, ಶುದ್ಧ ಭಾಷೆ, ಮತ್ತು ವಿದ್ಯಾರ್ಥಿಗಳ ಮೇಲೆ ತಾತ್ವಿಕ ಕಾಳಜಿ ಹೊಂದಿದ ವ್ಯಕ್ತಿತ್ವದ ಮಾದರಿ ಅವರು.

ಸರ್ ನೀವು ಇಲ್ಲ ಎನ್ನುವ ಸುದ್ದಿ ಮನಸ್ಸಿಗೆ ನೋವು ತಂದಿದೆ. ದೇವರು ನಿಮ್ಮ ಆತ್ಮಕ್ಕೆ ಸದ್ಗತಿ ನೀಡಲಿ.

ಗುರುಭ್ಯೋ ನಮಃ - ಎಲ್ಲಿಂದಲೋ ಬಂದವರು, ನಮ್ಮ ಜೀವನದ ಮಾರ್ಗದರ್ಶಕರಾಗಿ ಗುರುವಾಗಿ ಸಿಕ್ಕಿದ್ದು ಅದು ಬದುಕಿನ ವಿಸ್ಮಯ. ಅವರ ನೆನಪನ್ನು ನಮ್ಮಲ್ಲಿ ಉಳಿಸೋಣ.

– ಹಳ್ಳಿ ನ್ಯೂಸ್

ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಿ:

ನಮ್ಮ ಇಂಗ್ಲಿಷ್ paper ನೋಡಿ next day class ಗೆ ಬಂದು "ನಿಮ್ಮ paper ನೋಡಿ, ಹೊಟ್ಟೆ ಪುಳ್ಳ ಲೈಸ್ ಊಟ ಮಾಡಿ, ಒಂದು ಆಪಳ್ ತಿಂದು ರಾತ್ರಿ ಮಲಗುವುದು ಒಂದು ಗಂಡ (ಗಂಟೆ)" ಎನ್ನುವ ಅವರ ಕೇರಳ ಶೈಲಿಯ ಕನ್ನಡ ಇನ್ನೂ ನೆನಪು ಇದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ 🙏🙏ಓಂ ಶಾಂತಿ 🙏🙏 – Jairaj Gundabala
ಅಯ್ಯೋ ಹೌದಾ!! ದೇವರು ಗುರುಗಳ ಆತ್ಮಕ್ಕೆ ಸದ್ಗತಿ ನೀಡಲಿ. – Shanakar Gouda Gunavante
ನಾಯರ್ ಸರ್ ವಿಧಿವಶರಾದರಂತೆ.... 🙏😔 – Chaya Bhandari

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!