2025-26ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಹ್ವಾನ

hallinews team
0

ಶಿಕ್ಷಕರ ದಿನಾಚರಣೆ 05 ಸೆಪ್ಟೆಂಬರ್ 2025 ಅಂಗವಾಗಿ ಪ್ರಶಸ್ತಿ ಪ್ರದಾನ ಪ್ರಸ್ತಾವನೆ ಹಾಗು ದಿನಾಂಕ ಘೋಷಣೆ

ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ 2025 ಪ್ರಶಸ್ತಿ ಪ್ರಕ್ರಿಯೆ ಪ್ರಾರಂಭ

  • ಪ್ರತಿ ವರ್ಷದಂತೆ, 2025-26 ನೇ ಸಾಲಿನ 5ನೇ ಸೆಪ್ಟೆಂಬರ್ 2025 ರ "ಶಿಕ್ಷಕರ ದಿನಾಚರಣೆ" ಅಂಗವಾಗಿ ಶಿಕ್ಷಕ ಪ್ರಶಸ್ತಿ.
  • "ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ"ಗಳಿಗೆ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರ ಆಯ್ಕೆ.
  • "ತಾಲೂಕಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ"ಗಳಿಗೆ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರ ಆಯ್ಕೆ.
  • ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಸದಸ್ಯರ ವಿವರ 
  • ಸಮಿತಿಯ ಕರ್ತವ್ಯಗಳ ಮಾರ್ಗಸೂಚಿ ಪ್ರಕಟವಾಗಿದೆ.

ಬಹುಮಾನ ಹಾಗೂ ಖರ್ಚುವೆಚ್ಚ ವಿವರಗಳು

  • ಜಿಲ್ಲಾ ಪ್ರಶಸ್ತಿಗೆ ತಲಾ ರೂ.5000/- ರಂತೆ ನಗದು ಪುರಸ್ಕಾರ.
  • ಆಯ್ಕೆ ಸಮಿತಿಯ ಖರ್ಚು/ವೆಚ್ಚಗಳಿಗಾಗಿ ಪ್ರತಿ ಜಿಲ್ಲೆಗೆ ರೂ.2000/- ರಂತೆ ನೀಡಲಾಗುವ ಸಾದಿಲ್ವಾರು ವೆಚ್ಚ.
  • ರಾಜ್ಯದ ಎಲ್ಲಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಲ್ಲೂಕು ಮಟ್ಟದ "ಶಿಕ್ಷಕರ ದಿನಾಚರಣೆ" ಕಾರ್ಯಕ್ರಮ ಆಯೋಜನೆಗಾಗಿ ರೂ.20,000/- ವೆಚ್ಚ.
  • ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಜಿಲ್ಲಾ ಮಟ್ಟದ "ಶಿಕ್ಷಕರ ದಿನಾಚರಣೆ" ಕಾರ್ಯಕ್ರಮ ಆಯೋಜನೆಗಾಗಿ ರೂ: 30,000/- ಆಯೋಜನಾ ವೆಚ್ಚ.

ಮಹತ್ವದ ದಿನಾಂಕಗಳು:

ತಾಲ್ಲೂಕು ಹಂತದ ಆಯ್ಕೆ

ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ತಾಲ್ಲೂಕು ಹಂತದ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಅರ್ಹರಾದ ಶಿಕ್ಷಕರ ಪಟ್ಟಿಯನ್ನು ಪ್ರಸ್ತಾವನೆಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸಲು ಕೊನೆಯ ದಿನಾಂಕ: 31.07.2025

ಜಿಲ್ಲಾ ಹಂತದ ಆಯ್ಕೆ

ತಾಲ್ಲೂಕು ಹಂತದಿಂದ ಬಂದ ಪ್ರಸ್ತಾವನೆಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಪರಿಶೀಲಿಸಿ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡುವುದು. ಆಯ್ಕೆಯಾದ ಪ್ರೌಢ ಶಾಲಾ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಪಟ್ಟಿಯನ್ನು ಸಂಬಂಧಿಸಿದ ಉಪನಿರ್ದೇಶಕರು (ಆಡಳಿತ) ರವರು ನಿಧಿಗಳ ಕಛೇರಿಗೆ ಕಳುಹಿಸಲು ಕೊನೆಯ ದಿನಾಂಕ : 02.09.2025

ಪ್ರಶಸ್ತಿ ಪ್ರದಾನ

ದಿನಾಂಕ: 05.09.2025 ರಂದು ಜಿಲ್ಲಾ ಹಂತದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪಡೆದಂತಹ ಶಿಕ್ಷಕರನ್ನು ಗೌರವಿಸಲಾಗುವುದು

https://www.hallinews.in/2025/06/new-rules-for-cutting-trees-in-kannada.html

ಆಯ್ಕೆ ಮಾನದಂಡಗಳು

ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿರುವ ಶಿಕ್ಷಕರ ಪ್ರಸ್ತಾವನೆಗಳನ್ನು ಜಿಲ್ಲಾ ಆಯ್ಕೆ ಸಮಿತಿ ಪರಿಶೀಲಿಸಿ, ಶಿಕ್ಷಕರ ಶೈಕ್ಷಣಿಕ ಹಾಗೂ ಇತರೆ ಸಾಧನೆಗಳನ್ನು ನಿಖರವಾಗಿ ಮೌಲ್ಯಮಾಪನ ಮಾಡಿ ಪ್ರಶಸ್ತಿಗೆ ಅರ್ಹರಾದಂತಹ ಶಿಕ್ಷಕರನ್ನು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ. ಆಯಾ ಜಿಲ್ಲೆಗಳಲ್ಲಿರುವ ತಾಲ್ಲೂಕುಗಳ ಸಂಖ್ಯೆಗಳಿಗೆ ಅನುಗುಣವಾಗಿ ಹಂಚಿಕೆ ಮಾಡಿರುವಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪ್ರಶಸ್ತಿಗಳನ್ನು ಆಯ್ಕೆ ಮಾಡಲಾಗುವುದು.
ತಾಲ್ಲೂಕು ಮಟ್ಟದ ಆಯ್ಕೆಸಮಿತಿ ಶಿಫಾರಸ್ಸು ಮಾಡಿರುವ ಪ್ರಸ್ತಾವನೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಮೌಲ್ಯಮಾಪನ ಮಾಡುವುದು.

ಅರ್ಹತೆ

  • ಪ್ರಶಸ್ತಿಗೆ ಆಯ್ಕೆ ಮಾಡುವಾಗ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿಗಳಲ್ಲಿ ಬೋಧನೆ ಮಾಡುವ ಹಾಗೂ ಶಾಲೆಗೆ ಪೂರಕವಾದ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶಿಕ್ಷಕರನ್ನು ಮಾತ್ರ ಪರಿಗಣಿಸಲಾಗುವುದು.
  • ಕನಿಷ್ಠ 10 ವರ್ಷಗಳ ಕಾಲ ಬೋಧಕರಾಗಿ ಸೇವೆ ಸಲ್ಲಿಸಿರುವವರಾಗಿರಬೇಕು (ಗ್ರಾಮೀಣ ಶಾಲೆಗಳಲ್ಲಿ ಕನಿಷ್ಠ 05 ವರ್ಷಗಳು).
  • ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು.
  • ಹಿಂದಿನ ಸಾಲುಗಳಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಮರು ಆಯ್ಕೆ ಮಾಡಲಾಗುವುದಿಲ್ಲ.
  • ಆಯ್ಕೆ ಮಾಡಿರುವ ಶಿಕ್ಷಕರು ಸಮಾಜದ ಹಾಗೂ ಇಲಾಖೆಯ ಗೌರವಗಳಿಗೆ ಪಾತ್ರರಾಗಿರಬೇಕು. ಶಿಕ್ಷಕರ ಆಯ್ಕೆ ಸಂಪೂರ್ಣವಾಗಿ ಮೌಲ್ಯಾಧಾರಿತವಾಗಿರಬೇಕು. ಸಚ್ಚಾರಿತ್ರ್ಯವನ್ನು ಹೊಂದಿರಬೇಕು, ಯಾವುದೇ ದೂರು/ವಿಚಾರಣೆ ಇರಬಾರದು
  • ತಾಲ್ಲೂಕು ಆಯ್ಕೆ ಸಮಿತಿಯವರು ಅರ್ಹರಾದುತಹ ಶಿಕ್ಷಕರ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದು.
  • ಅಂತಿಮವಾಗಿ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದಂತಹ ಶಿಕ್ಷಕರ ಕಾರ್ಯಕ್ಷೇತ್ರಕ್ಕೆ ಜಿಲ್ಲಾ ಆಯ್ಕೆ ಸಮಿತಿಯವರು ಭೇಟಿ ನೀಡಿ ತಾಲ್ಲೂಕು ಆಯ್ಕೆ ಸಮಿತಿಯವರು ಶಿಫಾರಸ್ಸು ಮಾಡಿರುವಂತಹ ಅಂಶಗಳನ್ನು ಪರಿಶೀಲಿಸಿದ ನಂತರ ಪ್ರಶಸ್ತಿಗೆ ಅರ್ಹರಾಗಿದ್ದರೆ ಮಾತ್ರ ಆಯ್ಕೆ ಮಾಡಲಾಗುವುದು.

ಪ್ರಾತಿನಿಧ್ಯ

  • ಒಂದು ತಾಲ್ಲೂಕಿನಿಂದ ಕನಿಷ್ಠ 6 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 4 ಪ್ರೌಢ ಶಾಲಾ ಶಿಕ್ಷಕರನ್ನು ಶಿಫಾರಸ್ಸು ಮಾಡಬೇಕು
  • ಶೇಕಡ 50 ಮಹಿಳಾ ಶಿಕ್ಷಕರನ್ನು ಒಳಗೊಂಡಿರಬೇಕು
  • ಪ್ರಶಸ್ತಿಗೆ ಆಯ್ಕೆಯಾದಂತಹ ಪ್ರತಿಯೊಬ್ಬ ಶಿಕ್ಷಕರ ಶೈಕ್ಷಣಿಕ ಚಟುವಟಿಕೆ ಹಾಗೂ ಇಲಾಖಾ ಪ್ರೋತ್ಸಾಹದಾಯಕ ಕಾರ್ಯಕ್ರಮಗಳಾದ ಮಕ್ಕಳನ್ನು ಶಾಲೆಗೆ ಕರೆತರುವುದು, ಸಮುದಾಯದತ್ತ ಶಾಲೆ, ವಿಶೇಷ ದಾಖಲಾತಿ ಆಂದೋಲನ, ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲು ಮಾಡುವುದು ಇತ್ಯಾದಿ ಕಾರ್ಯಕ್ರಮಗಳಲ್ಲಿ ಸಮರ್ಪಕ ನಿರ್ವಹಣೆ ಬಗ್ಗೆ ಪೂರ್ಣ ಮಾಹಿತಿಗಳೊಂದಿಗೆ ಪ್ರಸ್ತಾವನೆಯನ್ನು ತಾಲ್ಲೂಕು ಆಯ್ಕೆ ಸಮಿತಿ, ಜಿಲ್ಲಾ ಆಯ್ಕೆ ಸಮಿತಿಗೆ ಕಳುಹಿಸಿಕೊಡಬೇಕು.

ಆಯ್ಕೆ ಸಮಿತಿಗಳು

ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ

  1. ಕ್ಷೇತ್ರ ಶಿಕ್ಷಣಾಧಿಕಾರಿಗಳು - ಅಧ್ಯಕ್ಷರು
  2. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಒಬ್ಬ ಹಿರಿಯ ಉಪನ್ಯಾಸಕರು – ಗೌರವಾಧ್ಯಕ್ಷರು
  3. ಮೂವರು ಶಿಕ್ಷಣ ತಜ್ಞರು (ಪ್ರಾಥಮಿಕ/ಪ್ರೌಢ/ಶಿಕ್ಷಕರ ಶಿಕ್ಷಣ)
  4. ಕ್ಷೇತ್ರ ಸಮನ್ವಯಾಧಿಕಾರಿಗಳು
  5. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರು
  6. ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು
  7. ತಾಲ್ಲೂಕಿನ ಅನುಭವಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ-ಪ್ರಾಂಶುಪಾಲರು

ಜಿಲ್ಲಾ ಮಟ್ಟದ ಆಯ್ಕೆ ಸಮಿತಿ

  1. ಜಿಲ್ಲಾ ಉಪನಿರ್ದೇಶಕರು (ಆಡಳಿತ)-ಅಧ್ಯಕ್ಷರು
  2. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನಿರ್ದೇಶಕರು (ಅಭಿವೃದ್ಧಿ)- ಗೌರವಾಧ್ಯಕ್ಷರು
  3. ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರತಿನಿಧಿಗಳು
  4. ಇಬ್ಬರು ಶಿಕ್ಷಣ ತಜ್ಞರು (ಪ್ರಾಥಮಿಕ/ಪ್ರೌಢ ಶಿಕ್ಷಣ)
  5. ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರುಗಳ ಸಂಘದ ಅಧ್ಯಕ್ಷರು
  6. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರು
  7. ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಪಡೆದ ಒಬ್ಬ ಶಿಕ್ಷಕರು

* ಎರಡೂ ಸಮಿತಿಗಳಲ್ಲಿ ಮಹಿಳಾ ಸದಸ್ಯರನ್ನು ಒಳಗೊಂಡಿರಬೇಕು

ಹೆಚ್ಚಿನ ಮಾಹಿತಿ

ದಿನಾಂಕ: 15.09.2025 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವೆಚ್ಚದ ವಿವರ, ಪ್ರಶಸ್ತಿ ವಿವರ ಹೆಚ್ಚಿನ ಮಾಹಿತಿಗಾಗಿ ಇಲಾಖಾ ಆದೇಶ ಪರಿಶೀಲಿಸಿ. ಇಲಾಖಾ ಆದೇಶಕ್ಕಾಗಿ ಕ್ಲಿಕ್‌ ಮಾಡಿ.

© 2025 ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!