46 ಸಾವಿರಕ್ಕೂ ಹೆಚ್ಚಿನ ಶಾಲೆಗಳಿಗೆ ₹67.15 ಕೋಟಿ ಶಾಲಾನುದಾನ ಬಿಡುಗಡೆ

Halli News team
0

ರಾಜ್ಯದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಹಿರಿಯ ಪ್ರೌಢಶಾಲೆಗಳಿಗೆ 2025–26ನೇ ಸಾಲಿನ 50% ಶಾಲಾ ಅನುದಾನವನ್ನು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ. ಈ ಕುರಿತು ಕಚೇರಿಯಿಂದ ಹೊರಡಿಸಿರುವ ಆದೇಶ ಪ್ರಕಾರ, ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಒಟ್ಟು 46,391 ಶಾಲೆಗಳಿಗೆ ರೂ. 67,15,77,500 (ಅರವತ್ತೇಳು ಕೋಟಿ ಹದಿನೈದು ಲಕ್ಷ ಎಪ್ಪತ್ತೇಳು ಸಾವಿರ ಐನೂರು) ಅನುದಾನ ಬಿಡುಗಡೆಗೊಂಡಿದೆ. ಇದರ ವಿವರ ಈ ಕೆಳಗಿನಂತೆ ಇದೆ.

school image of Karnataka.

🔹 ಪ್ರಾಥಮಿಕ ಶಾಲೆಗಳಿಗೆ ₹53.33 ಕೋಟಿ

ಪಿಎಬಿ (PAB) ಅನುಮೋದನೆಯಡಿ ರಾಜ್ಯದ 41,110 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ₹53,33,25,000 ಅನುದಾನ ಬಿಡುಗಡೆಗೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಪ್ರತಿ ಶಾಲೆಗೆ ರೂ. 5,000ರಿಂದ 50,000ರವರೆಗೆ ಮೊತ್ತವನ್ನು ಮಂಜೂರು ಮಾಡಲಾಗಿದೆ.
ಈ ಮೊತ್ತವನ್ನು ನೇರವಾಗಿ SDMC ಮತ್ತು ಶಾಲಾ ಮುಖ್ಯೋಪಾಧ್ಯಾಯರ ಜಂಟಿ ಖಾತೆಗಳಿಗೆ (PRABANDH COMPONENT CODE: 5.3.1) ಮೂಲಕ ವರ್ಗಾಯಿಸಲಾಗುವುದು.

🔹 ಪ್ರೌಢ ಮತ್ತು ಹಿರಿಯ ಪ್ರೌಢಶಾಲೆಗಳಿಗೆ ₹13.82 ಕೋಟಿ

ಇದೇ ರೀತಿಯಲ್ಲಿ, 5281 ಸರ್ಕಾರಿ ಸೆಕೆಂಡರಿ ಹಾಗೂ ಸೀನಿಯರ್ ಸೆಕೆಂಡರಿ ಶಾಲೆಗಳಿಗೆ ರೂ. 13,82,52,500 ಅನುದಾನ ಬಿಡುಗಡೆಗೊಂಡಿದೆ.
ಈ ಅನುದಾನವನ್ನು PRABANDH COMPONENT CODE: 3.4.1 (PFMS LINE ITEM CODE F.03.12) ಅಡಿಯಲ್ಲಿ ನೀಡಲಾಗಿದೆ.

ಶಾಲಾ ಅನುದಾನ ಬಿಡುಗಡೆ – 2025–26

ಪ್ರಾಥಮಿಕ ಶಾಲೆಗಳು

ಕ್ರ.ಸಂ. ವಿದ್ಯಾರ್ಥಿಗಳ ಸಂಖ್ಯೆ ಘಟಕ ವೆಚ್ಚ (₹) ಶಾಲೆಗಳ ಸಂಖ್ಯೆ ಒಟ್ಟು ಅನುದಾನ (₹)
1 1–30 5,000 17,310 8,65,50,000
2 31–100 12,500 14,097 17,62,12,500
3 101–250 25,000 7,471 18,67,75,000
4 251–1000 37,500 2,225 8,34,37,500
5 1000 ಕ್ಕಿಂತ ಹೆಚ್ಚು 50,000 7 3,50,000
ಒಟ್ಟು 41,110 ₹53,33,25,000

ಸೆಕೆಂಡರಿ / ಹಿರಿಯ ಸೆಕೆಂಡರಿ ಶಾಲೆಗಳು

ಕ್ರ.ಸಂ. ವಿದ್ಯಾರ್ಥಿಗಳ ಸಂಖ್ಯೆ ಘಟಕ ವೆಚ್ಚ (₹) ಶಾಲೆಗಳ ಸಂಖ್ಯೆ ಒಟ್ಟು ಅನುದಾನ (₹)
1 1–30 5,000 83 4,15,000
2 31–100 12,500 1,231 1,53,87,500
3 101–250 25,000 2,205 5,51,25,000
4 251–1000 37,500 1,662 6,23,25,000
5 1000 ಕ್ಕಿಂತ ಹೆಚ್ಚು 50,000 100 50,00,000
ಒಟ್ಟು 5,281 ₹13,82,52,500

ಒಟ್ಟು ಶಾಲೆಗಳು ಒಟ್ಟು ಅನುದಾನ (₹)
46,391 ₹67,15,77,500

🔹 ಅನುದಾನದ ಬಳಕೆಗೆ ಸ್ಪಷ್ಟ ಮಾರ್ಗಸೂಚಿಗಳು Guidelines for utilization.

ಬಿಡುಗಡೆಗೊಂಡ ಅನುದಾನವನ್ನು ಶಾಲಾ ನಿರ್ವಹಣಾ ಸಮಿತಿಗಳು (SDMC) ಹಾಗೂ ಮುಖ್ಯೋಪಾಧ್ಯಾಯರು ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಬಳಸಬೇಕಾಗಿದೆ.
ಮುಖ್ಯ ಉದ್ದೇಶಗಳು:

  • ಖರೀದಿಗೆ ಅಗತ್ಯ ಕ್ರಿಯಾ ಯೋಜನೆ ತಯಾರಿಸಿ ಅದರಂತೆ ಖರ್ಚು ಮಾಡುವುದು.

  • ಶಾಲಾ ಕಛೇರಿಗಳಿಗೆ ಅಗತ್ಯವಾದ ಸ್ಟೇಷನರಿ ವಸ್ತುಗಳ ಖರೀದಿ

  • ಶಾಲೆಯ ಸಣ್ಣಪುಟ್ಟ ದುರಸ್ತಿಗಳಾದ ಬಾಗಿಲು, ಕಿಟಕಿ, ನೀರಿನ ಟ್ಯಾಂಕ್ ದುರಸ್ಥಿ

  • ಶೌಚಾಲಯ ಮತ್ತು ಶಾಲಾ ಆವರಣದ ದಿನನಿತ್ಯ ಸ್ವಚ್ಚತೆ

  • ಮೇಲಾವರಣ ಮತ್ತು ಆಟದ ಮೈದಾನದ ಸ್ವಚ್ಛತಾ ಕಾರ್ಯಗಳು

  • ಸಿ.ಎಸ್.ಎಸ್.‌ ಪೋರ್ಟಲ್‌ ಮುಖಾಂತರವೇ ನಿರ್ವಹಿಸಲು ಸೂಚಿಸಿದೆ. CSS Portal

  • ಖರೀದಿ ನಂತರ ಅಗತ್ಯ ಬಿಲ್‌ಗಳನ್ನ ನಿರ್ವಹಿಸುವುದು ಕೂಡಾ ಶಾಲಾ ಹಂತದಲ್ಲಿ ಆಗಬೃಕಿರುವ ಕಾರ್ಯ.

ಅದರಲ್ಲೂ ಒಟ್ಟು ಅನುದಾನದ ಕನಿಷ್ಠ 50% ಮೊತ್ತವನ್ನು ಶಾಲಾ ಸ್ವಚ್ಛತಾ ಚಟುವಟಿಕೆಗಳಿಗೆ ಕಡ್ಡಾಯವಾಗಿ ಬಳಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

🔹 ನಿರ್ವಹಣೆ ಮತ್ತು ಮೇಲ್ವಿಚಾರಣೆ

ಈ ಸಾರಿ ಕಡ್ಡಾಯವಾಗಿ ಪ್ರತಿ ಶಾಲೆಯ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಸಂಬಂಧಿಸಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ (CRP) ಗಳಿಗೆ ಹಸ್ತಾಂತರಿಸಲಾಗಿದೆ. ಅವರು ಪ್ರತಿ ಶಾಲೆಗೆ ಭೇಟಿ ನೀಡಿ ಕಾರ್ಯನಡೆದ ಮಾಹಿತಿ, ಚಿತ್ರಗಳು ಹಾಗೂ ವೀಡಿಯೊಗಳನ್ನು ssakaraccess@gmail.com ಗೆ ಕಳುಹಿಸುವಂತೆ ಸೂಚಿಸಲಾಗಿದೆ.

ಅದೇ ರೀತಿ, SDMC ಸದಸ್ಯರು ಹಾಗೂ ಶಿಕ್ಷಕರು ಪ್ರತಿ ತಿಂಗಳು ಸಭೆ ನಡೆಸಿ ಅನುದಾನದ ವೆಚ್ಚದ ವಿವರಗಳನ್ನು ಮಂಡಿಸಬೇಕು. ಅನುದಾನದ ದುರುಪಯೋಗ ಅಥವಾ ವಿಳಂಬ ಕಂಡುಬಂದಲ್ಲಿ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು ನೇರ ಹೊಣೆಗಾರರಾಗಲಿದ್ದಾರೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

🔹 ಜಿಲ್ಲೆಗಳಿಗೆ 15 ಅಕ್ಟೋಬರ್ ಒಳಗೆ ವೆಚ್ಚ ಮಾಡಲು ಸೂಚನೆ

ಜಿಲ್ಲೆ ಮತ್ತು ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ 8 ಅಕ್ಟೋಬರ್ ಒಳಗೆ ಅನುದಾನವನ್ನು ಶಾಲೆಗಳಿಗೆ ತಲುಪಿಸಲು, ಹಾಗೂ 15 ಅಕ್ಟೋಬರ್ 2025ರೊಳಗೆ ವೆಚ್ಚಭರಿಸಲು ಸೂಚನೆ ನೀಡಲಾಗಿದೆ. ಅದೇ ರೀತಿ ಖರ್ಚಿನ ಉಪಯೋಗಿತ ಪ್ರಮಾಣಪತ್ರವನ್ನು ಜಿಲ್ಲೆ ಎ.ಪಿ.ಸಿ ಮತ್ತು ಡಿ.ವೈ.ಪಿ.ಸಿ ಅಧಿಕಾರಿಗಳು ಪರಿಶೀಲಿಸಿ ಕಚೇರಿಗೆ ಸಲ್ಲಿಸಬೇಕಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಸ್ವಚ್ಛತಾ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬರುವ ನಿರೀಕ್ಷೆಯಿದೆ. School Grant release for the year 2025-26 50% of the grant. 

ಕೊನೆ ಹನಿ:
ಈಗಾಗಲೇ (Karnataka Social and education Survey 2025) ಸಮೀಕ್ಷೆ ಕಾರ್ಯದಲ್ಲಿರುವ ಶಿಕ್ಷಕರು ಶಾಲೆಗಳ ಮುಖ್ಯ ಶಿಕ್ಷಕರೂ (Head Master) ಆಗಿರುವುದರಿಂದ ನೀಡಿದ ದಿನಾಂಕದೊಳಗೆ ಮಾಡುವುದು ಸುಲಭದ ಮಾತೇ ಎಂಬ ಅಳಲು ಕೇಳಿಬರುತ್ತಿದೆ. (Utilization of the Grant)ಉಪಯೋಗಿಸುವ ದಿನಾಂಕ ಸಡಿಲಿಸಿದರೆ ಖಂಡಿತವಾಗಿಯೂ ಪರಿಣಾಮಕಾರಿ ಹಣಕಾಸು ನಿರ್ವಹಣೆ ಸಾಧ್ಯ ಎಂಬ ದ್ವನಿಯೂ ಕೆಳಿಬರುತ್ತಿದೆ. ಇಲ್ಲವಾದರೆ ಬಿಡುಗಡೆಯಾದ ಹಣ ಎರ್ರಾಬಿರ್ರಿಯಾಗಿ ತಾಳ ತಪ್ಪಿ ಖರ್ಚಾಗುವ ಭಯವಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ. ಬಿಡುಗಡೆಯಾದ ಅನುದಾನದ ಸದ್ಭಳಕೆ ಬಗ್ಗೆ ಹಣ ಬಿಡುಗಡೆ ಮಾಡುವವರು ಕೂಡ ವಿವೇಚನೆಯಿಂದ ಬಿಡುಗಡೆಗೊಳಿಸಬೇಕು ಎನ್ನುವುದು ಅಷ್ಟೇ ಸತ್ಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!