ಚೆಕ್‌ ಬರೆದ ಕಾರಣಕ್ಕೆ ಅಮಾನತ್ತಾದ ಶಿಕ್ಷಕ

Halli News team
0
wrong check by teacher

ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ರೋಹ್ನಾಟ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಚಿತ್ರಕಲಾ ಶಿಕ್ಷಕ ಅಟ್ಟರ್ ಸಿಂಗ್ ವಿರುದ್ಧ ಶಾಲಾ ಶಿಕ್ಷಣ ನಿರ್ದೇಶನಾಲಯ ಅಮಾನತ್ತಿನ ಕ್ರಮ ಕೈಗೊಂಡಿದೆ. 

ಸೆಪ್ಟೆಂಬರ್ 25 ರಂದು 7,616 ರೂ.ಗಳನ್ನು ಒಳಗೊಂಡಿರುವ ಚೆಕ್ ನೀಡಿಕೆ ಸಂಬಂದ,  ನೀಡಿದ ಚೆಕ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ 'Saven Thursday Six Harendra Sixtey' ಎಂದು ಬರೆದಿದ್ದು, ಶಿಕ್ಷಕರ ವಿರುದ್ದ ಗರಂ ಆಗಿದ್ದು ವ್ಯವಸ್ಥೆಯ ಕುರಿತು ಮಾತಾಡಿಕೊಳ್ಳುತ್ತಿದ್ದಾರೆ..

ನಿರ್ದೇಶಕರಾದ ಆಶಿಶ್ ಕೊಹ್ಲಿಯವರು  "ಇಲಾಖೆಯ ಪ್ರತಿಷ್ಠೆಗೆ ಕಳಂಕ ತರುವಂತಹ ಯಾವುದೇ ನಿರ್ಲಕ್ಷ್ಯ, ಆಕಸ್ಮಿಕತೆ, ಅಧಿಕೃತ ಜವಾಬ್ದಾರಿಗಳ ನಿರ್ಲಕ್ಷ್ಯವು ನಿಯಮಗಳ ಪ್ರಕಾರ ಕಠಿಣ ಶಿಸ್ತು ಕ್ರಮಕ್ಕೆ ಕಾರಣವಾಗುತ್ತದೆ" ಎಂದು ಎಚ್ಚರಿಸಿದ್ದಾರೆ.

ಪ್ರಾಂಶುಪಾಲರು ಮತ್ತು ಶಿಕ್ಷಕರು ಶನಿವಾರ ಶಾಲಾ ಶಿಕ್ಷಣ ನಿರ್ದೇಶಕ ಆಶಿಶ್ ಕೊಹ್ಲಿ ಅವರ ಮುಂದೆ ವೈಯಕ್ತಿಕವಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಸಿಂಗ್ ಸರಿಯಾದ ಜ್ಞಾನದ ಕೊರತೆಯಿಂದ ಮತ್ತು ಅಜಾಗರೂಕತೆಯಿಂದ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅದನ್ನು ನಿರ್ದೇಶಕರು ಒಪ್ಪಿರುವುದಿಲ್ಲ. ಇದರಿಂದ ಅಸಮಾಧಾನಗೊಂಡ ನಿರ್ದೇಶಕರು ಶೀಕ್ಷಕರನ್ನು ಅಮಾನತ್ತಿನಲ್ಲಿಟ್ಟಿದ್ದಾರೆ.

ಸದರಿ ಶಿಕ್ಷಕರ ವಿರುದ್ಧ ಕೇಂದ್ರ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1965 ರ ಅಡಿಯಲ್ಲಿ ಶಿಸ್ತು ಕ್ರಮಗಳನ್ನು ಕೈಗೊಳ್ಳಲು ಮತ್ತು ಈ ನಿರ್ದೇಶನಾಲಯಕ್ಕೆ ಕ್ರಮ ಕೈಗೊಂಡ ವರದಿಯನ್ನು ಆದಷ್ಟು ಬೇಗ ಸಲ್ಲಿಸಲು ನಿರ್ದೇಶನಾಲಯವು ಶಾಲಾ ಶಿಕ್ಷಣದ ಉಪ ನಿರ್ದೇಶಕ (ಪ್ರಾಥಮಿಕ) ಸಿರ್ಮೌರ್ ಅವರಿಗೆ ನಿರ್ದೇಶನ ನೀಡಿದೆ. ಹಣಕಾಸಿನ ವಿಷಯಗಳು ಸೇರಿದಂತೆ ಅಧಿಕೃತ ದಾಖಲೆಗಳನ್ನು ಸಿದ್ಧಪಡಿಸುವಾಗ ಮತ್ತು ನೀಡುವಾಗ ನಿಖರತೆ, ಜವಾಬ್ದಾರಿ ಮತ್ತು ಆಡಳಿತಾತ್ಮಕ ಔಚಿತ್ಯದ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಳ್ಳಬೇಕು ಎಂದು ನಿರ್ದೇಶನಾಲಯವು ಸೂಚಿಸಿದೆ. ತಪ್ಪು ಸಾಬೀತಾದರೆ ನಿಯಮದ ಪ್ರಕಾರ ಸದರಿ ಶಿಕ್ಷಕರನ್ನು ನೌಕರಿಯಿಂದ ವಜಾಗೊಳಿಸಬಹುದಾಗಿದೆ. ಇಲಾಖೆಯ ಮಾನ ಮರ್ಯಾದೆ ಹರಾಜಾಗುವ ಕಾರ್ಯ ಮತ್ತು ಸಾರ್ವಜನಿಕರ ವಿಶ್ವಾಸ ಘಾತದ ಕಾರ್ಯ ಆದುದರಿಂದ ಇದನ್ನ ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ.

wrong check written by teacher, Attar Singh, Himachal Pradesh School incident, september 25 2025, Ashis Kohli, Suspension, Public Servant Act 1965

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!