ಅಮೇರಿಕಾದಿಂದ ಬಂದಿರುವ ಈ ಅಪರೂಪ ಮತ್ತು ಮನಕಲಕುವ ಸಂಗತಿಯಲ್ಲಿ, ಒಬ್ಬ ಮಹಿಳೆ ತಾನೇ ಹೆರಿಗೆಯ ನಂತರ ದತ್ತು ನೀಡಿದ್ದ ತನ್ನ ಜೈವಿಕ ಪುತ್ರನನ್ನೇ ಗೊತ್ತಿರದೆ ಮದುವೆಯಾದ ಘಟನೆ ವರದಿಯಾಗಿದೆ.

👉 Read more:
ಪಾಲಕರ ಸಭೆಯಲ್ಲಿ ಭೇಟಿಯಾಗಿದ್ದ ತನ್ನ ಸಹಪಾಠಿಯ ತಾಯಿಯನ್ನು ವಿವಾಹವಾದ ಜಪಾನಿನ 32 ವರ್ಷದ ಯುವಕ!!!.. ಆಪ್ತರಿಗೆ ಷೇರ್ ಮಾಡಿಮಹಿಳೆ ತಾನು ಮದುವೆಯಾದ ಯುವಕ ತನಗಿಂತ ವಯಸ್ಸಿನಲ್ಲಿ ಸಣ್ಣವನಿದ್ದರೂ, ಅದು ಸಮಸ್ಯೆಯೇ ಆಗಿರಲಿಲ್ಲ. ಮದುವೆಯಾಗಿ ಎರಡು ಮಕ್ಕಳನ್ನ ಪಡೆದಿದ್ದರು ಸಂಸಾರ ಚಂದವಾಗಿ ಸಾಗುತಿದ್ದಾಗ ಇಬ್ಬರಲ್ಲಿ ಏನೋ ಒಂದು ಗೊಂದಲ ಶುರುವಾಗಿತ್ತು. ತನ್ನ ಗೊಂದಲ ನಿವಾರಣೆಗೆ ಡಿ.ಎನ್.ಎ. ಪರೀಕ್ಷೆ ಮಾಡಿಸಿಯೇ ಬಿಡುವ ನಿರ್ಧಾರ ಮಾಡುತ್ತಾಳೆ. ವರದಿ ಬರುವವರೆಗೆ ಇದ್ದ ಚಿಂತೆ ಈಗ ಅಪರಾದಿ ಪ್ರಜ್ಞೆಯಾಗಿ ಕಾಡುವಂತಾಗಿದೆ. ಮಕ್ಕಳನ್ನ ಏನೆಂದು ಕರೆಯುವುದೆಂದು ಚಿಂತೆಗೀಡಾಗಿದ್ದಾರೆ. ಯಾಕೆಂದರೆ, ಅವಳು ಮದುವೆಯಾದದ್ದು ತನ್ನ ಮಗನನ್ನೇ!!!
ಆರ್ಥಿಕ ಕಷ್ಟ ಮತ್ತು ಕುಟುಂಬದ ಒತ್ತಡದಿಂದಾಗಿ ಬಾಲ್ಯದಲ್ಲಿಯೇ ಕುಟುಂಬ ಅವಳನ್ನ ಮದುವೆ ಮಾಡಿಕೊಟ್ಟಿತ್ತು. ಆ ದಂಪತಿಗಳಿಗೆ ಒಂದು ಮಗು ಹುಟ್ಟಿತ್ತು, ಹುಟ್ಟುವಷ್ಟರಲ್ಲಿಯೇ ಮದುವೆಯಾದವ ಬಿಟ್ಟು ಹೋಗಿದ್ದ,. ಮಗು ಅನಾಥವಾಗಬಾರದೆಂದು ತನಗೆ ಗೊತ್ತಿಲ್ಲದ ಯಾರಿಗೋ ತನ್ನ ಮಗುವನ್ನ ದತ್ತು ಕೊಟ್ಟಿದ್ದಳು.
ಆ ಮಗುವನ್ನು ಬೇರೆ ನಗರದ ಒಂದು ದಂಪತಿಗಳು ದತ್ತು ತೆಗೆದುಕೊಂಡು, ಅವನ ಜೈವಿಕ ತಾಯಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಅವನನ್ನು ಬೆಳೆಸಿದರು. ಇದರ ಪರಿಣಾಮ ತನ್ನ ತಾಯಿ ಯಾರೆಂದು ಗೊತ್ತಿಲ್ಲದೇ ಅವರನ್ನೇ ಪಾಲಕರೆಂದು ನಂಬಿ ಬದುಕಿದ್ದ.
👉 Read more:
ಸರಕಾರದ ಉಪಯುಕ್ತ ಸ್ಕೀಮ್ಗಳು.. ಆಪ್ತರಿಗೆ ಷೇರ್ ಮಾಡಿಹಲವು ವರ್ಷಗಳ ನಂತರ, ಅವನು ವಯಸ್ಕನಾದ ನಂತರ ಯಾವೊದೋ ಸಂದರ್ಭದಲ್ಲಿ ತನ್ನ ಜೈವಿಕ ತಾಯಿಯನ್ನ ಭೇಟಿಯಾದ. ಅಲ್ಲಿ ಬೆಳೆದದ್ದೇ ದೈಹಿಕ ಆಕರ್ಷಣೆ. ವಯಸ್ಸಿನ ಅಂತರ ಇದ್ದರೂ ಅದು ಸಮಸ್ಯೆಯೇ ಆಗಲಿಲ್ಲ. ತಮ್ಮ ನಿಜವಾದ ಸಂಬಂಧದ ಬಗ್ಗೆ ತಿಳಿಯದೆ, ಅವರಿಬ್ಬರೂ ಪ್ರೇಮದಲ್ಲಿ ಬಿದ್ದು, ಅಂತಿಮವಾಗಿ ಮದುವೆಯಾದರು.
ಈ ಆಘಾತಕಾರಿ ಸತ್ಯವು ಅವರ ಮದುವೆಯ ನಂತರ ಅದೂ ಎರಡು ಮಕ್ಕಳಾದ ಬಳಿಕ ಸತ್ಯ ಬಹಿರಂಗವಾಯಿತು. "ಕೆಲವು ಘಟನೆಗಳು" ಈ ಸತ್ಯವನ್ನು ಬಹಿರಂಗಪಡಿಸಲು ಕಾರಣವಾಯಿತು ಎಂದು ಇನ್‌ಸ್ಟಾಗ್ರಾಮ್ ಖಾತೆ 6thxwave ನಲ್ಲಿ ತಿಳಿಸಿದ್ದಾರೆ.
ಈ ತಿಳಿವಳಿಕೆಯು ಇಬ್ಬರಿಗೂ ತುಂಬಾ ದೊಡ್ಡ ಮಾನಸಿಕ ಆಘಾತವನ್ನು ಉಂಟುಮಾಡಿದೆ. ಈ ನೋವಿನ ಸಂಗತಿ ಬಹಿರಂಗವಾದ ನಂತರ, ಈಗ ಇಬ್ಬರೂ ಆಪ್ತಸಲಹೆಯ ಸಹಾಯ ಪಡೆಯುತ್ತಿದ್ದಾರೆ ಎಂದು ವರದಿಯು ತೀರ್ಮಾನಿಸುತ್ತದೆ.
ಇದೊಂದು ಜಗತ್ತಿನಲ್ಲಿ ನಡೆದ ಅಥವಾ ನಡೆಯಬಹುದಾದ ವಿಚಿತ್ರ ಘಟನೆ. ಇತಿಹಾಸದಲ್ಲಿ ಉಲ್ಲೇಖಿತ ಗ್ರೀಕ್ ಪುರಾಣದ ಪ್ರಕಾರ ಈಡಿಪಸ್ ಥೀಬ್ಸ್ ರಾಜ್ಯದ ದೊರೆ. ಗೊತ್ತಿಲ್ಲದೆ ತಂದೆಯನ್ನೇ ಕೊಂದು ತಾಯಿಯನ್ನೇ ಮದುವೆಯಾದ ವ್ಯಕ್ತಿ. ಈಡಿಪಸ್ ಥೀಬ್ಸ್‍ನ ದೊರೆಯಾಗಿ ಸಾಯುವತನಕ ರಾಜ್ಯಭಾರ ಮಾಡಿದನಾದರೂ ತಮ್ಮಿಬ್ಬರಿಗೂ ಇರುವ ಸಂಬಂಧದಲ್ಲಿನ ಸತ್ಯ ತಿಳಿದಾಗ ಅವನ ತಾಯಿ ಹೇಗೆ ನೇಣುಹಾಕಿಕೊಂಡಳು ಎಂಬುದನ್ನು ಹೋಮರ್ ಕವಿಯೇ ಉಲ್ಲೇಖಿಸುತ್ತಾನೆ.