
👉 Read more:
ಪಾಲಕರ ಸಭೆಯಲ್ಲಿ ಭೇಟಿಯಾಗಿದ್ದ ತನ್ನ ಸಹಪಾಠಿಯ ತಾಯಿಯನ್ನು ವಿವಾಹವಾದ ಜಪಾನಿನ 32 ವರ್ಷದ ಯುವಕ!!!.. ಆಪ್ತರಿಗೆ ಷೇರ್ ಮಾಡಿ👉 Read more:
ಮಗನೇ ಗಂಡನಾದ ಕಥೆ- ತಾಯಿಯೇ ಹೆಂಡತಿಯಾದ ಕಥೆ!!!..ಧಾರವಾಡ, ಅಕ್ಟೋಬರ್ 13 – ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಚುನಾವಣಾ ಪ್ರಕ್ರಿಯೆಯು ಇಂದು ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನೆರವೇರಿತು. ಯಾವುದೇ ಅಹಿತಕರ ಘಟನೆ ಸಂಭವಿಸದೆ, ಪ್ರಾಮಾಣಿಕತೆ ಹಾಗೂ ಶಿಸ್ತಿನೊಂದಿಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಒಟ್ಟೂ 181 ಮತಗಳು ಚಲಾವಣೆಯಾಗಿದ್ದು, ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಉಳಿವಿಗೆ ಕಟಿಬದ್ಧವಾಗಿ ನಿಂತಿರುವುದು ಕಂಡುಬಂತು.
ಈ ಚುನಾವಣಾ ಪ್ರಕ್ರಿಯೆಯಲ್ಲಿ ತಾವುಗಳಿಗೆ ವಹಿಸಲಾದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ ಚುನಾವಣಾ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ್ ಸರ್, ಶಶಿ ಸರ್, ರಾಜೀವ್ ಸರ್, ಶಿವು ಸರ್, ಅನಂತ್ ಸರ್, ಬಸವರಾಜ್ ಸರ್, ಅಜಯ್ ಸರ್, ರೋಹಿತ್ ಸರ್ ಹಾಗೂ ನಿಂಗಪ್ಪ ಸರ್‍ಗಳಿಗೆ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಲಾಗಿದೆ. 💐🎊
👉 Read more:
ಸರಕಾರದ ಉಪಯುಕ್ತ ಸ್ಕೀಮ್ಗಳು.. ಆಪ್ತರಿಗೆ ಷೇರ್ ಮಾಡಿಇಂದಿನ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೆ ಸ್ಪರ್ಧೆ ನಡೆಯಿತು. ಫಲಿತಾಂಶವನ್ನು ಚುನಾವಣಾ ಸಮಿತಿಯು ಪ್ರಕಟಿಸಿದ್ದು, ಅದರಲ್ಲಿ ಆಯ್ಕೆಯಾದವರು ಹೀಗಿದ್ದಾರೆ –
1️⃣ ಅಧ್ಯಕ್ಷ: ಸಚಿನ್ ಕೂರಾಡೇ
2️⃣ ಉಪಾಧ್ಯಕ್ಷ: ಆದರ್ಶ ಬಿರಾದಾರ
3️⃣ ಪ್ರಧಾನ ಕಾರ್ಯದರ್ಶಿ: ಸುರೇಶಗೌಡ ಪಾಟೀಲ್
ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ. ಆಯ್ಕೆಯಾದ ಎಲ್ಲರು ಮತಚಲಾಯಿಸಿದ ಸ್ನೇಹಬಳಗಕ್ಕೆ ಧನ್ಯವಾದ ಅರ್ಪಿಸಿದರು
ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ಬೆಂಬಲಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.ಕರ್ಣಾಟಕ ವಿಶ್ವವಿದ್ಯಾಲಯ ಸಂಶೋಧಕರ ಸಂಘ (KURSA) ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ ನಿಮಗೆ ನಾನು ಸದಾ ಕೃತಜ್ಞನಾಗಿದ್ದೇನೆ.ಈ ಜಯವು ನನ್ನದೇ ಅಲ್ಲ ಇದು ನಮ್ಮೆಲ್ಲರದು. ನಾವು ಎಲ್ಲರೂ ಸೇರಿ ಸಂಶೋಧನಾ ಸಂಸ್ಕೃತಿಯನ್ನು ಬಲಪಡಿಸಲು, ಪರಸ್ಪರ ಸಹಕಾರವನ್ನು ವೃದ್ಧಿಸಲು ಮತ್ತು ಸಂಶೋಧಕರ ಕಲ್ಯಾಣಕ್ಕಾಗಿ ಶ್ರಮಿಸಲು ನಿರ್ಧರಿಸೋಣ. ಸಂಘಟಿತತೆ, ಪ್ರಾಮಾಣಿಕತೆ ಮತ್ತು ಪ್ರಗತಿಶೀಲ ಚಿಂತನೆಯೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಂಶೋಧನಾ ವಲಯವನ್ನು ಮತ್ತಷ್ಟು ಶ್ರೇಷ್ಠವಾಗಿಸಲು ಕೆಲಸ ಮಾಡೋಣ. ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ನಂಬಿಕೆ ಮತ್ತು ಪ್ರೋತ್ಸಾಹಕ್ಕೆ. ಭಾವಪೂರ್ಣ ಧನ್ಯವಾದಗಳನ್ನ – ಸಚಿನ್ ಕುರಾಡೆ, ಅಧ್ಯಕ್ಷರು, KURSA ಕರ್ಣಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ಸಲ್ಲಿಸಿದರುಧನ್ಯವಾದ ಅರ್ಪಿಸಿದರು
ಇದೆ ವೇಳೆ ಚುನಾವಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ದಾಖಲೆ ಪ್ರಮಾಣದ ಮತದಾನ ಮಾಡಿದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ಚುನಾವಣಾ ಸಮಿತಿಯು ಕೃತಜ್ಞತೆ ಸಲ್ಲಿಸಿದೆ.
ಅದೇ ರೀತಿ, ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಲು ಸಹಕಾರ ನೀಡಿದ ಭದ್ರತಾ ಇಲಾಖೆ (Security Department), ಭವನ ವಿಭಾಗ (Building Department) ಹಾಗೂ ಗಾಂಧಿಯನ್ ಅಧ್ಯಯನ ವಿಭಾಗ (Gandhian Study Department) ಗಳಿಗೂ ಧನ್ಯವಾದಗಳು ಸಲ್ಲಿಸಲಾಯಿತು. 💐🙏🏻
🗞️ ಪ್ರಕಟಣೆ:
ಚುನಾವಣಾ ಉಸ್ತುವಾರಿ ಸಮಿತಿ,
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.